ಬೆಂಗಳೂರು : ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಕೋಮಾಗೆ

ಬೆಂಗಳೂರು,ನ.5- ಬಿಬಿಎಂಪಿಯವರಿಗೆ ಇನ್ನೆಷ್ಟು ಜೀವಗಳ ಬಲಿ ಬೇಕೋ ಆ ದೇವರೆ ಬಲ್ಲ. ರಸ್ತೆ ಗುಂಡಿ ಗಂಡಾಂತರಕ್ಕೆ ಒಂದಿಲ್ಲೊಂದು ಜೀವ ಬಲಿಯಾಗುತ್ತಿದ್ದರೂ ಪಾಲಿಕೆ ಮಾತ್ರ ಇನ್ನು ಗುಂಡಿ ಮುಚ್ಚುವ ಕಾರ್ಯವನ್ನು ಮಾತ್ರ ಚುರುಕುಗೊಳಿಸಿಲ್ಲ. ಬಲಿಗಾಗಿ ಬಾಯ್ತೆರೆದು ಕುಳಿತಿರುವ ಯಮಸ್ವರೂಪಿ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರನೊಬ್ಬ ಕೋಮಾಗೆ ಹೋಗಿರುವ ಘಟನೆ ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿ ನಡೆದಿದೆ.ವಿದ್ಯಾರಣ್ಯಪುರದ ನಿವಾಸಿ ಸಂದೀಪ್(37) ಕೋಮಾದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕಳೆದ ಮಂಗಳವಾರ ರಾತ್ರಿ ಸಂದೀಪ್ ಸ್ನೇಹಿತರ ಜೊತೆ ಕ್ರಿಕೆಟ್ ಆಡಿ […]