ದುಬೈನಿಂದ ಕಳ್ಳ ಸಾಗಾಣೆಯಾಗುತ್ತಿದ್ದ 2.8 ಕೆ.ಜಿ. ಚಿನ್ನ ವಶ

ಬೆಂಗಳೂರು : ದುಬೈನಿಂದ ಆಗಮಿಸಿದ ವಿಮಾನದಲ್ಲಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಸುಮಾರು 1.37 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್‍ಗಳನ್ನು ಕೇಂದ್ರ ಅಬಕಾರಿ ತೆರಿಗೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಮಂಗಳವಾರ ಬೆಳಗ್ಗೆ 10.30ಕ್ಕೆ ಆಗಮಿಸಿದ ಇಂಡಿಗೋ 6ಇ096 ವಿಮಾನವನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಚಿನ್ನ ತುಂಬಿದ ಬ್ಯಾಗ್ ಪತ್ತೆಯಾಗಿದೆ. 24 ಚಿನ್ನದ ಸ್ವರೂಪದಲ್ಲಿ 2.8 ಕೆಜಿಯಷ್ಟು ತೂಕದ ಚಿನ್ನವನ್ನು ದುಬೈನಿಂದ ಕಳ್ಳಸಾಗಾಣಿಕೆ ಮೂಲಕ ತರಲಾಗಿದೆ. ವಿಮಾನ ನಿಲ್ದಾಣದಲ್ಲಿ ಬಿಗಿ ತಪಾಸಣೆ ಇದ್ದರಿಂದ ಬ್ಯಾಗ್ […]