ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೈವೆ ನಾಮಕರಣಕ್ಕೆ ಕಿತ್ತಾಟ

ಬೆಂಗಳೂರು,ಫೆ.7- ಬಹುನಿರೀಕ್ಷಿತ ಮೈಸೂರು- ಬೆಂಗಳೂರು ಎಕ್ಸ್‍ಪ್ರೆಸ್ ಹೈವೇಗೆ ಯಾವ ಹೆಸರಿಡಬೇಕು ಎಂಬುದು ರಾಜಕೀಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿಯಾಗಿದೆ. ಈ ಎಕ್ಸ್‍ಪ್ರೆಸ್ ಹೈವೇಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ರಾಜಕೀಯ ಲಾಭಕ್ಕಾಗಿ ಒಂದೊಂದು ಹೆಸರುಗಳನ್ನು ಮುಂದಿಡುತ್ತಿರುವುದು ಕಗ್ಗಂಟಾಗಿ ಪರಿಣಮಿಸಿದೆ. ಎಕ್ಸ್‍ಪ್ರೆಸ್ ಹೈ ವೇಗೆ ಬಿಜೆಪಿ, ಕಾವೇರಿ ಇಲ್ಲವೇ ಮೈಸೂರು ಮಹಾಸಂಸ್ಥಾನದ ಕೃಷ್ಣರಾಜ ಒಡೆಯರ್ ಹೆಸರು ಇಡಬೇಕೆಂದು ಒತ್ತಾಯಿಸಿದೆ. ಇನ್ನು ಜೆಡಿಎಸ್ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೆಸರಿಡಲು ಒತ್ತಾಯಿಸಿದ್ದರೆ, ಕಾಂಗ್ರೆಸ್ ಕಾದುನೋಡುವ ತಂತ್ರ ಅನುಸರಿಸುತ್ತಿದೆ. ಮುಂದಿನ ತಿಂಗಳು […]