55 ಲಕ್ಷ ಬೆಲೆಯ ಚಿನ್ನಾಭರಣ ದೋಚಿದ ಚೋರರ ಪತ್ತೆಗಾಗಿ 2 ವಿಶೇಷ ತಂಡ ರಚನೆ

ಬೆಂಗಳೂರು,ಫೆ.24- ಡ್ರಿಲ್ಲಿಂಗ್ ಯಂತ್ರದಿಂದ ಗೋಡೆ ಕೊರೆದು ಜ್ಯುವೆಲರ್ ಅಂಗಡಿಯೊಳಗೆ ನುಸುಳಿ 55 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ನೇತೃತ್ವದ ಈ ತಂಡಗಳು ಈಗಾಗಲೇ ಕಾರ್ಯಾಚರಣೆ ಕೈಗೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ. ಆರೋಪಿಗಳ ಪತ್ತೆಗೆ ರಚಿಸಲಾಗಿರುವ ಈ ತಂಡಗಳು ಜ್ಯುವೆಲರಿ ಅಂಗಡಿ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿ ಪುಟೇಜ್‍ಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿವೆ. ಆರೋಪಿಗಳು ಕೃತ್ಯಕ್ಕೆ […]