“ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಸಮೀಕ್ಷೆ ಯಾವುದೇ ಸಂಸ್ಥೆಗೆ ಅನುಮತಿ ನೀಡಿಲ್ಲ”

ಬೆಂಗಳೂರು,ನ.17-ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಸಮೀಕ್ಷೆ ನಡೆಸಲು ಯಾವುದೇ ಸಂಸ್ಥೆಗೆ ಅನುಮತಿ ನೀಡಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸ್ಪಷ್ಟನೆ ನೀಡಿದ್ಧಾರೆ. ಕಾಂಗ್ರೆಸ್ ನಾಯಕರು ಇಂದು ಬೆಳಿಗ್ಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ ಬೆನ್ನಲ್ಲೆ ಚುನಾವಣಾ ಆಯೋಗ ಪತ್ರಿಕಾ ಹೇಳಿಕೆ ನೀಡಿ ನಾಲ್ಕು ಅಂಶಗಳ ಸ್ಪಷ್ಟನೆ ನೀಡಿದೆ. ಬಿಬಿಎಂಪಿ ಜಿಲ್ಲಾ ಚುನಾವಣಾಧಿಕಾರಿ ಅವರು, ಯಾವುದೇ ಸಂಸ್ಥೆಗೆ ಸಮೀಕ್ಷೆ ನಡೆಸಲು ಅನುಮತಿ ನೀಡಿರುವುದಿಲ್ಲ. ಸರ್ಕಾರೇತರ ಸಂಸ್ಥೆ ಚುಲುಮೆ ರವರಿಗೆ ಮತದಾರರ ಜಾಗೃತಿ ಅಭಿಯಾನದ ಅರಿವು […]