ಹೃದಯಘಾತದಿಂದ ಸಂಸದ ಸಾವು, ಭಾರತ್ ಜೋಡೋ ಯಾತ್ರೆ ಸ್ಥಗಿತ

ಲೂಯಾನ,ಜ.14-ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ ಸಂಸದರೊಬ್ಬರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. 76 ವರ್ಷ ವಯಸ್ಸಿನ ಜಲಂಧರ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರು ಹೃದಯಘಾತದಿಂದ ನಿಧನರಾದವರು.ಪಂಜಾಬ್‍ನ ಫಿಲ್ಲೌರ್ ನಲ್ಲಿ ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಅವರು ಇದ್ದಕ್ಕಿದ್ದ ಹಾಗೆ ಕುಸಿದುಬಿದ್ದರು. ತಕ್ಷಣ ಅವರನ್ನು ಫಗ್ವಾರಾದಲ್ಲಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮದ್ಯ ಖರೀದಿ ವಯೋಮಿತಿ 21ರಿಂದ 18ಕ್ಕಿಳಿಸಲು ಮುಂದಾದ ಸರ್ಕಾರ ಸಂಸದರು ಕುಸಿದು ಬೀಳುತ್ತಿದ್ದಂತೆ ರಾಹುಲ್ ಗಾಂಧಿ ಅವರು ಯಾತ್ರೆ ಸ್ಥಗಿತಗೊಳಿಸಿ ಆಸ್ಪತ್ರೆಗೆ […]

ಭಾರತ ಜೋಡೋ ಪಾದಯಾತ್ರೆಯಲ್ಲಿ ರಾಹುಲ್‍ ಗಾಂಧಿ ಸೈಕಲ್ ಸವಾರಿ

ಇಂದೋರ್, ನ.28- ಭಾರತ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದ ರಾಹುಲ್‍ಗಾಂಧಿ ಇಂದು ಸೈಕಲ್ ಸವಾರಿಯ ಮೂಲಕ ಗಮನ ಸೆಳೆದರು.ಇಂದು ಬೆಳಗ್ಗೆ ಇಂದೋರ್‍ನ ಗಣಪತಿ ಚೌಕದಿಂದ ಯಾತ್ರೆ ಆರಂಭಗೊಂಡಿದ್ದು, ಯಾತ್ರೆಗೆ ಬೆಂಬಲ ವ್ಯಕ್ತ ಪಡಿಸಿ ಹಿರಿಯ ಸೈಕಲ್ ಯಾತ್ರಿಗಳು ಭಾಗವಹಿಸಿದ್ದರು. ಈ ವೇಳೆ ಸೈಕ್ಲಿಸ್ಟ್ ಒಬ್ಬರು ರಾಹುಲ್‍ಗಾಂಧಿಗೆ ಸೈಕಲ್ ನೀಡಿ ಸವಾರಿ ಮಾಡಲು ಆಹ್ವಾನಿಸಿದರು. ರಾಹುಲ್‍ಗಾಂ ಸ್ವಲ್ಪ ದೂರ ಸೈಕಲ್ ಸವಾರಿ ನಡೆಸಿದರು. ಇದಕ್ಕೂ ಮುನ್ನಾ ನಿನ್ನೆ ಬುಲೇಟ್ ಸವಾರಿ ಮಾಡುವ ಮೂಲಕ ರಾಹುಲ್ ಗಮನ ಸೆಳೆದಿದ್ದರು. ಖ್ಯಾತ ಉರ್ದು […]

ತುಂತುರು ಮಳೆಯಲ್ಲೇ ಹೆಜ್ಜೆ ಹಾಕಿದ ರಾಹುಲ್ ಗಾಂಧಿ

ಚಿತ್ರದುರ್ಗ,ಅ.11- ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಇಂದು ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಹತ್ತಿಕೋಟೆಯಿಂದ ಸಾಣೆಕೆರೆವರೆಗೂ ತುಂತುರು ಮಳೆಯಲ್ಲೇ ಹೆಜ್ಜೆ ಹಾಕಿತು. ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಆರಂಭವಾದ ಯಾತ್ರೆ ಆನಂತರ ಅಬಾಧಿತವಾಗಿ ಮುಂದುವರೆಯಿತು. ಯಾತ್ರೆಯಲ್ಲಿ ಭಾಗವಹಿಸಲು ಜನೋತ್ಸಾಹ ಮೇರೆ ಮೀರಿದ್ದು, ಕೆಲವು ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ರಾಹುಲ್ ಗಾಂಧಿಯೊಂದಿಗೆ ಹೆಜ್ಜೆ ಹಾಕಿದರು. ಪಾದಯಾತ್ರೆ ನಡುವೆಯೂ ಜನರೊಂದಿಗೆ ಸಂವಾದ ನಡೆಸುತ್ತಿರುವ ರಾಹುಲ್ ಗಾಂಧಿ ತಮಗಾಗಿ ರಸ್ತೆಬದಿಯಲ್ಲಿ ಕಾಯುತ್ತಿದ್ದ ಚಿಕ್ಕಮಗಳನ್ನು ಕರೆದು ಮಾತನಾಡಿಸಿದರು. ಈ ವೇಳೆ […]

ಇಂದು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು ಭಾರತ ಐಕ್ಯತಾ ಯಾತ್ರೆ

ಮಂಡ್ಯ, ಅ.6- ನಿರುದ್ಯೋಗ, ಭ್ರಷ್ಟಚಾರ, ಬೆಲೆ ಹೇರಿಕೆ, ಕೋಮುವಾದದ ವಿರುದ್ಧ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗು ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ಎರಡು ದಿನಗಳ ವಿಶ್ರಾಂತಿ ಬಳಿಕ ಇಂದು ಮತ್ತೆ ಶುರುವಾಯಿತು. ಮುಂಜಾನೆ ಪಾಂಡವಪುರ ಬೆಳ್ಳಾಲೆ ಪ್ರಾಥಮಿಕ ಆರೋಗ್ಯಕೇಂದ್ರದಿಂದ ಆರಂಭಗೊಂಡ ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ಇಂದು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಎಂದಿನಂತೆ ಜನ ಸಾಮಾನ್ಯರು ರಾಹುಲ್ಗಾಂ ಅವರನ್ನು ಭೇಟಿ ಮಾಡಿ ಸಂಭ್ರಮಿಸಿದರು. ವಿಶೇಷ ಚೇತರು ಯಾತ್ರೆಯಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಮಕ್ಕಳು ರಾಹುಲ್ಗಾಂ ಅವರ ಕೈ ಹಿಡಿದು ನಡೆಯುವ […]

ಭಾರತ್ ಜೋಡೊ ಯಾತ್ರೆ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರಲ್ಲ : ಬೊಮ್ಮಾಯಿ

ಬೆಂಗಳೂರು,ಅ.6- ರಾಜ್ಯದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯಿಂದ ಸರ್ಕಾರ ಅಥವಾ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದರು. ನಗರದ ಕಬ್ಬನ್ ಉದ್ಯಾನ ವನದಲ್ಲಿ ಉಪ ಪೊಲೀಸ್ (ಕೇಂದ್ರ ವಲಯ) ಕಚೇರಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಭಾರತ್ ಜೋಡೋ ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿ ಭಾಗಿಯಾಗಿರುವುದು ಬಿಜೆಪಿ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಇದರಲ್ಲಿ ಕಾಂಗ್ರೆಸ್ ನಾಯಕರೆ ಭಾಗಿಯಾಗಿರುವುದರಿಂದ […]

ಭಾರತ ಐಕ್ಯತಾ ಯಾತ್ರೆಯ ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆ

ಮಂಡ್ಯ, ಅ.6- ಭಾರತ ಐಕ್ಯತಾ ಯಾತ್ರೆಯ ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಸ್ಥಳೀಯ ಪೊಲೀಸರು ಹಲ್ಲೆ ನಡೆಸಿ, ದೌರ್ಜನ್ಯವೆಸಗಿರುವುದು, ಆಕ್ರೋಶಕ್ಕೆ ಗುರಿಯಾಗಿದೆ.ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಯಾತ್ರೆಯಲ್ಲಿ ಭಾಗವಹಿಸಿದ್ದರಿಂದ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿತ್ತು. ಜನರ ನೂಕುನುಗ್ಗಲು ಹೆಚ್ಚಾಗಿತ್ತು. ಈ ನಡುವೆ ವರದಿ ಮಾಡುತ್ತಿದ್ದ ಪತ್ರಕರ್ತರಿಗೂ ತೊಂದರೆಯಾಗಿದ್ದು, ಪೊಲೀಸರು ಜಕ್ಕನಹಳ್ಳಿ ಬಳಿ ಇಬ್ಬರು ವರದಿಗಾರರ ಮೇಲೆ ಹಲ್ಲೆ ನಡೆಸಿದ್ದಾರೆ.ಯಾತ್ರೆ ಸಾಗುವ ಹಾದಿಯಲ್ಲಿ ಪೊಲೀಸರು ಭದ್ರತೆ ಹೆಸರಿನಲ್ಲಿ ಪದೇ ಪದೇ ಮಾಧ್ಯಮಗಳಿಗೆ ಕಿರಿಕಿರಿ ಮಾಡುತ್ತಿದ್ದರು. ಯಾತ್ರೆಗಿಂತಲೂ ವೇಗವಾಗಿ […]

“ದೇಶವನ್ನು ಇಬ್ಭಾಗ ಮಾಡಿದವರೇ ಈಗ ಭಾರತ್ ಜೋಡೊ ಯಾತ್ರೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ”

ವಿಜಾಪುರ,ಸೆ.30- ದೇಶವನ್ನು ಇಬ್ಭಾಗ ಮಾಡಿದವರೇ ಕಾಂಗ್ರೆಸ್ ಪಕ್ಷದವರು. ಈಗ ಭಾರತ್ ಜೋಡೊ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವನ್ನು ಒಡೆದು ದೇಶವನ್ನು ಕತ್ತರಿಸಿದವರು ಕಾಂಗ್ರೆಸಿಗರು. ಭಾರತ್ ಜೋಡೋ ಬದಲಿಗೆ ಕಾಂಗ್ರೆಸ್ ಚೋಡೊ ಮಾಡಿದ್ದರೆ ಅರ್ಥ ಬರುತ್ತಿತ್ತು ಎಂದು ವ್ಯಂಗ್ಯವಾಡಿದರು. ಯಾವ ಪುರುಷಾರ್ಥಕ್ಕೆ ಭಾರತ್ ಜೋಡೋ ನಡೆಸುತ್ತಿದ್ದಾರೊ ಗೊತ್ತಿಲ್ಲ. ಇದರಲ್ಲಿ ರಾಜಕೀಯ ಲಾಭ ಬಿಟ್ಟರೆ ಬೇರೇನೂ ಇಲ್ಲ. ದೇಶವನ್ನು ಒಗ್ಗೂಡಿಸುತ್ತೇವೆ ಎನ್ನುವವರಿಗೆ ದೇಶದ ಇತಿಹಾಸ ಗೊತ್ತಿದೆಯೇ ಎಂದು […]

ಸರ್ಕಾರ ಪ್ರತಿಪಕ್ಷಗಳ ಧ್ವನಿ ಅಡಗಿಸಲು ಯತ್ನಿಸಿರುವುದರಿಂದ ಭಾರತ ಐಕ್ಯತಾ ಯಾತ್ರೆ ಅನಿವಾರ್ಯ : ರಾಹುಲ್‍

ಚಾಮರಾಜನಗರ, ಸೆ.30- ಆಡಳಿತರೂಢ ಸರ್ಕಾರ ಶಾಸನಸಭೆಗಳು, ಮಾಧ್ಯಮಗಳು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಪ್ರತಿಪಕ್ಷಗಳ ಧ್ವನಿಯನ್ನು ಅಡಗಿಸಲು ಸರ್ಕಾರ ಮುಂದಾಗಿರುವುದರಿಂದ ನಮಗೆ ಪಾದಯಾತ್ರೆ ಅನಿವಾರ್ಯವಾಗಿದೆ. ಇದನ್ನು ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಹೇಳಿದರು. ಜಿಲ್ಲೆಯ ಗುಂಡ್ಲಪೇಟೆಯ ಅಂಬೇಡ್ಕರ್ ಭವನದ ಮೈದಾನದಲ್ಲಿ ರಾಜ್ಯದಲ್ಲಿ ನಡೆಯುವ ಭಾರತ ಐಕ್ಯತಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ಯಾಕೆ ಎಂಬ ಪ್ರಶ್ನೆಯನ್ನು ನಮಗೆ ಕೇಳಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ […]

ಐಕ್ಯತಾ ಯಾತ್ರೆಗೆ ಅಡ್ಡಿಪಡಿಸಿದರೆ ಹುಷಾರ್ : ಬಿಜೆಪಿಗೆ ಸಿದ್ದರಾಮಯ್ಯ ವಾರ್ನಿಂಗ್

ಚಾಮರಾಜನಗರ, ಸೆ.30- ಭಾರತ ಐಕ್ಯತಾ ಯಾತ್ರೆಗೆ ಅಡ್ಡಿಪಡಿಸುವ ಪ್ರಯತ್ನವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿಯ ಯಾವ ನಾಯಕರು ರಾಜ್ಯದಲ್ಲಿ ತಿರುಗಾಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಕೇರಳದಿಂದ ರಾಜ್ಯಕ್ಕೆ ಆಗಮಿಸಿದ ಭಾರತ ಐಕ್ಯತಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರ ರೀತಿಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 571 ಕಿ.ಮೀಗಳ ಯಾತ್ರೆಯನ್ನು ಯಾರೂ ಮಾಡಿಲ್ಲ. ಇದು ಅಭೂತಪೂರ್ವವಾದ ಕಾರ್ಯಕ್ರಮ. ಇದಕ್ಕೆ ನಮ್ಮೆಲ್ಲರ ಬೆಂಬಲ ಇರುವುದಷ್ಟೇ ಅಲ್ಲ ಸಕ್ರಿಯ ಪಾಲ್ಗೊಳ್ಳುವಿಕೆ ಬಹಳ […]

ರಾಜ್ಯಕ್ಕೆ ಬಂದ ರಾಹುಲ್ ಯಾತ್ರೆಗೆ ಬಿಜೆಪಿಯಿಂದ ಟ್ವೀಟ್ ಟಾಂಗ್ ಸ್ವಾಗತ

ಬೆಂಗಳೂರು,ಸೆ.30- ಕಾಂಗ್ರೆಸ್ ಯುವಕ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ. ಎಐಸಿಸಿ ಮುಂದಿನ ಅಧ್ಯಕ್ಷ ಸ್ಥಾನವನ್ನು ನಕಲಿ ಗಾಂಧಿಗಳ ಕುಟುಂಬದಲ್ಲೇ ಇರಿಸಿಕೊಳ್ಳಲು ಮತ್ತು ನಿಯಂತ್ರಿಸಲು ನಡೆಸುತ್ತಿರುವ ಕಸರತ್ತು ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಮಾನ್ಯ ರಾಹುಲ್ ಗಾಂಯವರೇ ಅಪರಾಧ ಪ್ರಮಾಣ ಕಡಿಮೆ ಇರುವ ಕರ್ನಾಟಕಕ್ಕೆ ಸ್ವಾಗತ. ನಿಮ್ಮ ಶಾಂತಿಯ ಮಂತ್ರ ಕರುನಾಡಿಗೆ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದೆ. ಎನ್‍ಸಿಆರ್‍ಬಿ ವರದಿ ಪ್ರಕಾರ ಅಪರಾಧ ಸೂಚ್ಯಂಕ […]