ಕಾಶ್ಮೀರದ ಹಿಮಸೌಂದರ್ಯಕ್ಕೆ ಮಾರುಹೋದ ಕಾಂಗ್ರೆಸ್ ನಾಯಕರು

ಶ್ರೀನಗರ,ಜ.30- ಕಾಶ್ಮೀರದಲ್ಲಿ ನಡೆದ ಭಾರತ ಜೋಡೋ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದ ಕಾಂಗ್ರೆಸ್ ನಾಯಕರು ಹಿಮಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಅನೇಕ ಪ್ರಮುಖ ನಾಯಕರು ಕಣಿವೆ ರಾಜ್ಯದಲ್ಲಿ ಸುರಿಯುತ್ತಿರುವ ಹಿಮಮಳೆಯ ನಡುವೆ ಛತ್ರಿ ಹಿಡಿದು ಸೌಂದರ್ಯವನ್ನು ವರ್ಣನೆ ಮಾಡಿದ್ದಾರೆ. ಕಾಶ್ಮೀರದ ಹಿಮಪಾತ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಮನಸೋತಿರುವ ಡಿ.ಕೆ. ಶಿವಕುಮಾರ್ ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಭಾರತ ಜೋಡೋ ಯಾತ್ರೆ ಅಂತಿಮ ದಿನ ನಾವೆಲ್ಲ […]

ರಾಹುಲ್ ಹೇಳಿಕೆಗೆ ತಬ್ಬಿಬ್ಬಾದ ಪತ್ರಕರ್ತರು

ಇಂದೋರ್,ನ.29- ನಾನು ರಾಹುಲ್ ಗಾಂಧಿಯನ್ನು ಹಲವು ವರ್ಷಗಳ ಹಿಂದೆಯೇ ಕೈಬಿಟ್ಟಿದ್ದೇನೆ. ರಾಹುಲ್ ಗಾಂಧಿ ನಿಮ್ಮ ಮನಸ್ಸಿನಲ್ಲಿದ್ದಾರೆ. ನನ್ನಲ್ಲಿಲ್ಲ.. ಈ ರೀತಿ ವೇದಾಂತಿಯಂತೆ ಮಾತನಾಡಿ ರಾಹುಲ್ ಗಾಂಧಿ ಪತ್ರಕರ್ತರನ್ನೇ ತಬ್ಬಿಬ್ಬು ಮಾಡಿದ್ದಾರೆ. ಇಂದೋರ್‍ನಲ್ಲಿ ನಡೆದ ಪತ್ರಿಕಾಗೋಷ್ಠಿಯ ಪ್ರಶ್ನೋತ್ತರ ಅವಧಿಯಲ್ಲಿ ರಾಹುಲ್ ಉತ್ತರಗಳು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. 2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್‍ನ ಮುಂದಾಳುವನ್ನಾಗಿ ಬಿಂಬಿಸಲು ಹಲವು ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಅದರಲ್ಲಿ ಭಾರತ ಐಕ್ಯತಾ ಯಾತ್ರೆ ಪ್ರಮುಖವಾಗಿದೆ. ಗಡಿ ವಿವಾದ ಸಮರ್ಥ ವಾದಕ್ಕೆ […]

ಕಾಂಗ್ರೆಸ್ ಭಾರತ್ ಜೊಡೋಯಾತ್ರೆ ಕುರಿತು ಪ್ರಹ್ಲಾದ್ ಜೋಶಿ ವ್ಯಂಗ್ಯ

ಹುಬ್ಬಳ್ಳಿ,ಅ.23- ಪ್ರದಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಅಚ್ಚುಕಟ್ಟಾಗಿ ಜೊಡೋ ಆಗಿದೆ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟಿದ್ದಕ್ಕೆ ನೀವು ಭಾರತ ಜೋಡೋ ಮಾಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಚೀನಾಗೆ ಭೂಮಿ ಕೊಟ್ಟಿದ್ದರ ಜೊಡೋ ಮಾಡಿ. ನೀವು ತೋಡೋ ಮಾಡಿದವರ ಪಾರ್ಟಿಯವರು. ಮೊದಲು ತೋಡೋ ಮಾಡಿದರ ಜೋಡೋ ಮಾಡಿ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತ್ ಜೊಡೋ ಕಾಂಗ್ರೆಸ್ ತೊಡೋ ಯಾತ್ರೆಯಾಗುತ್ತಿದೆ. […]

ರಾಹುಲ್ ಗಾಂಧಿ ಯಾರು, ಏನು ಅನ್ನೋದನ್ನ ಐಕ್ಯತಾ ಯಾತ್ರೆ ತೋರಿಸಿಕೊಟ್ಟಿದೆ : ಸಿದ್ದರಾಮಯ್ಯ

ಬೆಂಗಳೂರು, ಅ.23- ಸುಳ್ಳು, ವ್ಯವಸ್ಥಿತವಾದ ಅಪಪ್ರಚಾರ, ನಿಂದನೆಗಳ ಮೂಲಕ ರಾಹುಲ್ ಗಾಂಧಿಯವರ ಚಾರಿತ್ರ್ಯಹರಣ ಮಾಡುತ್ತಾ ಬಂದವರಿಗೆ ರಾಹುಲ್ ಗಾಂಧಿ ಎಂದರೆ ಯಾರು, ಏನು ಎನ್ನುವುದನ್ನು ಭಾರತ ಐಕ್ಯತಾ ಯಾತ್ರೆ ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಭಾರತ ಐಕ್ಯತಾ ಯಾತ್ರೆ ಇಂದು ರಾಜ್ಯದಲ್ಲಿ ಯಶಸ್ವಿಯಾಗಿ ತನ್ನ ನಡಿಗೆ ಪೂರ್ಣಗೊಳಿಸಿರುವ ಕುರಿತು ಹೇಳಿಕೆ ನೀಡಿರುವ ಅವರು, ಜಾತಿ, ಮತ, ಪಂಥ, ಪಕ್ಷಗಳ ಭೇದವನ್ನು ಮರೆತು ನಮ್ಮ ಜೊತೆ ಹೆಜ್ಜೆ ಹಾಕಿ ಭಾರತ ಐಕ್ಯತಾ ಯಾತ್ರೆಯನ್ನು ಯಶಸ್ಸಿಯನ್ನಾಗಿ […]

ಬಳ್ಳಾರಿಗೆ ಬಂದ ರಾಹುಲ್ ಯಾತ್ರೆಗೆ ಸ್ವಾಗತ ಕೋರಿದ ಸಚಿವ ಶ್ರೀರಾಮುಲು

ಬೆಂಗಳೂರು,ಅ.15- ಗಣಿ ನಾಡು ಬಳ್ಳಾರಿಯಲ್ಲಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಬದಲಿಗೆ, ಪ್ರಾಯಶ್ಚಿತ ಯಾತ್ರೆ ನಡೆಸಬೇಕಿತ್ತು ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ತಾವು ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ. ಬದಲಿಗೆ ನಮ್ಮ ತಾಯಿಯನ್ನು ಗೆಲ್ಲಿಸಿದ್ದಕ್ಕೆ ಜನಾದೇಶವನ್ನು ದಿಕ್ಕರಿಸಿ ರಾಜೀನಾಮೆ ನೀಡಿದ್ದಕ್ಕೆ, ಅಧಿಕಾರದಲ್ಲಿ ಇದ್ದಾಗ ಏನು ಮಾಡದೆ ಮತದಾರರ ಕ್ಷಮೆ ಕೇಳುವ ಪ್ರಾಯಶ್ಚಿತ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಲು ಸಂಕೋಚ ಏಕೆ ? ಕಾಂಗ್ರೆಸ್ ನಾಯಕರೇ […]

ರಾಹುಲ್ ಯಾತ್ರೆಗೆ ಹೆಚ್ಚಿದ ಹುಮ್ಮಸ್ಸು

ಬೆಂಗಳೂರು,ಅ.12- ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆಯ 10ನೇ ದಿನವಾದ ಇಂದು ಮತ್ತಷ್ಟು ವೈಶಿಷ್ಟ್ಯಗಳಿಗೆ ಕಾರಣವಾಯಿತು. ಬೆಳಗ್ಗೆ ನಿಗದಿತ ಸಮಯಕ್ಕೆ ಚಳ್ಳಕೆರೆ ಪಟ್ಟಣದಿಂದ ಆರಂಭವಾದ ಪಾದಯಾತ್ರೆಗೆ ಜನಸ್ತೋಮದ ಬೆಂಬಲ ಕಂಡುಬಂದಿತು. ಪಟ್ಟಣದಾದ್ಯಂತ ಫ್ಲೆಕ್ಸ್, ಬ್ಯಾನರ್‍ಗಳ ಅಬ್ಬರ ಜೋರಾಗಿತ್ತು. ಪ್ರಮುಖವಾಗಿ ಕಾಂಗ್ರೆಸ್ ನಾಯಕರ ಲ್ಲಿರುವ ಒಗ್ಗಟ್ಟನ್ನು ಪ್ರತಿಪಾದಿ ಸುವ ಫ್ಲೆಕ್ಸ್‍ಗಳು ವ್ಯಾಪಕವಾಗಿದ್ದವು. ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ಪರಸ್ಪರ ಅಪ್ಪಿಕೊಂಡಿರುವುದು, ಮಲ್ಲಿಕಾರ್ಜುನ ಖರ್ಗೆ-ಸಿದ್ದರಾಮಯ್ಯ ಒಟ್ಟಾಗಿರುವುದು, ರಾಹುಲ್ ಗಾಂv- ಸಿದ್ದರಾಮಯ್ಯ ಅವರ ಕೈ ಹಿಡಿದು ಓಡುತ್ತಿರುವುದು ಸೇರಿದಂತೆ ಅನೇಕ ಭಾವಚಿತ್ರಗಳನ್ನೊಳಗೊಂಡ ಫ್ಲೆಕ್ಸ್‍ಗಳು ವ್ಯಾಪಕವಾಗಿದ್ದವು. ಕಾಂಗ್ರೆಸ್‍ನ ಆಂತರಿಕ […]

ರಾಹುಲ್ ಬೆನ್ನಿಗೆ ನಿಂತು ಗಮನ ಸೆಳೆಯುತ್ತಿರುವ ಗಡ್ಡಧಾರಿ

ಬೆಂಗಳೂರು,ಅ.11- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಹಲವರ ಪರಿಶ್ರಮ ಎದ್ದು ಕಾಣುತ್ತಿದೆ. ಅದರಲ್ಲಿ ಪ್ರಮುಖವಾಗಿ ಗಮನಸೆಳೆಯುವುದು ಗಡ್ಡಧಾರಿ ವ್ಯಕ್ತಿ. ಪ್ರತಿ ಫ್ರೇಮ್ನಲ್ಲೂ ರಾಹುಲ್ ಗಾಂಧಿ ಅವರ ಹಿಂದೆಯೇ ಕಾಣಿಸಿಕೊಳ್ಳುವ ಈ ಗಡ್ಡಧಾರಿ ಹೆಸರು ಅಲಂಕಾರ್. ರಾಹುಲ್ ಗಾಂಧಿ ಅವರ ಕಾರು ಚಾಲನೆಯಿಂದ ಹಿಡಿದು ಅವರ ವೈಯಕ್ತಿಕ ಅಗತ್ಯಗಳಿಗೆ ಸ್ಪಂದಿಸುವುದರಲ್ಲಿ ಅಲಂಕಾರ್ ಮಹತ್ವದ ಪಾತ್ರ ವಹಿಸಿದ್ದಾರೆ. ಯಾತ್ರೆಯುದ್ದಕ್ಕೂ ಕಾಲಕಾಲಕ್ಕೆ ನೀರು, ಹಣ್ಣಿನ ರಸ ಸೇರಿದಂತೆ ಅಗತ್ಯಗಳನ್ನು ಪೂರೈಸುವುದು ಕಂಡುಬರುತ್ತಿದೆ. ಯಾವ ಕ್ಷಣದಲ್ಲೂ ಅಲಂಕಾರ್ ಯಾತ್ರೆಯಿಂದ ಪಕ್ಕಕ್ಕೆ […]

ಐಕ್ಯತಾ ಯಾತ್ರೆಗೆ ಜಾತಿ, ಧರ್ಮ, ಪಕ್ಷಬೇಧ ಮರೆತು ಆಹ್ವಾನ : ಡಿಕೆಶಿ

ಮೈಸೂರು,ಸೆ.15- ರಾಜ್ಯ ಮತ್ತು ರಾಷ್ಟ್ರದ ಸಮಸ್ಯೆಗಳ ಚರ್ಚೆಗಾಗಿ ರಾಹುಲ್ ಗಾಂಧಿ ಅವರು ಭಾರತ ಐಕ್ಯತಾ ಯಾತ್ರೆ ನಡೆಸುತ್ತಿದ್ದು, ಇದರಲ್ಲಿ ಭಾಗವಹಿಸಲು ಜಾತಿ, ಧರ್ಮ, ಪಕ್ಷಬೇಧ ಮರೆತು ಪ್ರತಿಯೊಂದು ಮನೆಗೂ ಆಹ್ವಾನ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ತಾವು ಹಲವು ಕಡೆ ಪ್ರವಾಸ ಕೈಗೊಂಡು ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ಯಾತ್ರೆ ಹಾದುಹೋಗುವ ಜಾಗ ಮತ್ತು ತಂಗುವ ಸ್ಥಳಗಳ ಪರಿಶೀಲನೆ ನಡೆಸಿದ್ದೇನೆ. ಕಾರ್ಯಕರ್ತರು, ಮುಖಂಡರ ಜೊತೆ ಸಮಾಲೋಚನೆ ಮಾಡಿ ಪ್ರತಿ […]