ಶಾಸಕರ ಭವನದಲ್ಲಿ ಮೊಟ್ಟೆ ನಿರ್ಬಂಧ

ಬೆಂಗಳೂರು,ಆ.20- ಮಡಿಕೇರಿ ಪ್ರವಾಸದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪರಿಣಾಮ ಶಾಸಕರ ಭವನಕ್ಕೆ ಮೊಟ್ಟೆ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಮೊಟ್ಟೆ ತೆಗೆದುಕೊಂಡು ಶಾಸಕರ ಭವನಕ್ಕೆ ದಾಳಿ ನಡೆಸಬಹುದೆಂಬ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಶಾಸಕರ ಭವನದಲ್ಲಿ ಬಿಜೆಪಿಯ ಕೆ.ಜೆ.ಬೋಪಯ್ಯ ಮತ್ತು ಅಪ್ಪಚ್ಚರಂಜನ್ ಸೇರಿದಂತೆ ಕೆಲವು ಶಾಸಕರು ಇಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಅವರ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಕೊಠಡಿಗಳಿಗೆ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. […]