ಮಧ್ಯಪ್ರವೇಶಕ್ಕೆ ಚೀತಾ ಆಗಮನ, ಸಿಎಂ ಶಿವರಾಜ್ ಹೇಳಿದ್ದೇನು ಗೊತ್ತೇ..?

ಭೂಪಾಲ್,ಸೆ.17- ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದೇ ನಮೀಬಿಯಾದಿಂದ ಎಂಟು ಚಿರತೆಗಳು ಆಗಮಿಸಿರುವುದು ಮಧ್ಯಪ್ರದೇಶ ರಾಜ್ಯಕ್ಕೆ ದೊಡ್ಡ ಉಡುಗೊರೆಯಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ. ಚೀತಾಗಳ ಆಗಮನ ಐತಿಹಾಸಿಕವಾದುದು, ಇವುಗಳಿಂದ ರಾಜ್ಯದಲ್ಲಿ ವಿಶೇಷವಾಗಿ ಕುನೋ-ಪಾಲ್ಪುರ್‍ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು. ಪ್ರಾಜೆಕ್ಟ್ ಚೀತಾದಡಿ ಭಾರತದಲ್ಲಿ ಅತಿವೇಗದ ಪ್ರಾಣಿಯ ಪರಿಚಯವನ್ನು ಮಾಡಲಾಗುತ್ತಿದೆ, ಇದು ವಿಶ್ವದ ಮೊದಲ ಅಂತರ-ಖಂಡಾಂತರ ದೊಡ್ಡ ಕಾಡು ಮಾಂಸಾಹಾರಿಗಳ ಸ್ಥಳಾಂತರ ಯೋಜನೆಯಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ : 7 ದಶಕಗಳ […]