ವಿಭಜಕಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರ ದುರ್ಮರಣ

ಬೆಂಗಳೂರು, ಜ.7- ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿಕೊಂಡು ಬೈಕ್‍ನಲ್ಲಿ ಹಿಂದಿರುಗುತ್ತಿದ್ದಾಗ ಅತಿ ವೇಗದಿಂದಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಬನಶಂಕರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.  ಸಿವಿಲ್ ಎಂಜಿನಿಯರ್ ಲಕ್ಷ್ಮೀಶ (28) ಮತ್ತು ಲ್ಯಾಬ್ ಟೆಕ್ನೀಷಿಯನ್ ರಾಘವೇಂದ್ರ (26) ಮೃತಪಟ್ಟ ಸವಾರರು. ಇವರಿಬ್ಬರು ಬ್ಯಾಟರಾಯನಪುರದ ನಿವಾಸಿಗಳು. ಸ್ನೇಹಿತರಾದ ರಕ್ಷಿತ್, ಗೌತಮ್ ಅವರೊಂದಿಗೆ ಲಕ್ಷ್ಮೀಶ ಮತ್ತು ರಾಘವೇಂದ್ರ ರಾತ್ರಿ 9.45ರ ಸುಮಾರಿಗೆ ನಾಗರಬಾವಿಯಲ್ಲಿರುವ ಸೆರ್ಲಾಕ್ ರೆಸ್ಟೋರೆಂಟ್‍ಗೆ ಹೋಗಿ ಪಾರ್ಟಿ ಮಾಡಿದ್ದಾರೆ. […]