ಪರಿಷತ್‍ನಲ್ಲಿ ಕಾಂಗ್ರೆಸ್‍ನ ಧರಣಿ, ಗದ್ದಲದ ನಡುವೆಯೇ ಮಹತ್ವದ 4 ಮಸೂದೆಗಳು ಅಂಗೀಕಾರ
ಬೆಂಗಳೂರು,ಫೆ.22- ಕಳೆದ 2011ರಲ್ಲಿ ಕೆಪಿಎಸ್‍ಸಿಯಿಂದ ನೇಮಕಗೊಂಡು ಅಧಿಸೂಚನೆ ರದ್ದುಗೊಂಡಿದ್ದರಿಂದ ಅತಂತ್ರಕ್ಕೆ ಸಿಲುಕಿದ 362 ಮಂದಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಅನುಕೂಲವಾಗುವಂತಹ ವಿದೇಯಕವನ್ನು ವಿಧಾನಪರಿಷತ್‍ನಲ್ಲಿಂದು ಅಂಗೀಕರಿಸಲಾಯಿತು. ಕಾಂಗ್ರೆಸ್‍ನ ಧರಣಿ, ಗದ್ದಲ, ಗಲಾಟೆಯ ನಡುವೆಯೂ ಸಚಿವರು ವಿಧಾನಸಭೆಯಿಂದ ಅಂಗೀಕಾರಗೊಂಡಿದ್ದ ನಾಲ್ಕು ಮಹತ್ವದ ಮಸೂದೆಗಳನ್ನು ಪರಿಷತ್‍ನಲ್ಲಿ ಮಂಡಿಸಿದರು. ಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ಸಿವಿಲ್ ಸೇವೆಗಳ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ ವಿಧೇಯಕ 2022ಅನ್ನು ಮಂಡಿಸಿದರು. ಮಹಿಳೆಯೊಬ್ಬರು […]