ಜೋರಾದ ಪಕ್ಷಾಂತರ ಪರ್ವ, ಕೈ-ಕಮಲ ವಾಗ್ವಾದ

ಬೆಂಗಳೂರು,ಜ.26- ರಾಜ್ಯ ರಾಜ ಕಾರಣದಲ್ಲಿ ಇಂದು ಕೂಡ ಪಕ್ಷಾಂತರ ಪರ್ವದ ರಾಜಕಾರಣ ಮತ್ತೆ ಸದ್ದು ಮಾಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಭಾರೀ ವಾಕ್ಸಮರ ಮುಂದುವರೆದಿದೆ. ಬುಟ್ಟಿಯಲ್ಲಿ ಹಾವಿದೆ ಎಂದು ಪುಂಗಿ ಊದುವುದನ್ನು ನಿಲ್ಲಿಸಿ. ನಿಮಗೆ ತಾಕತ್ತಿದ್ದರೆ ಶಾಸಕರ ಹೆಸರನ್ನು ಬಹಿರಂಗಪಡಿಸಿ ಎಂದು ಬಿಜೆಪಿ ನಾಯಕರು ಕಾಂಗ್ರೆಸ್‍ನವರಿಗೆ ತಿರುಗೇಟು ನೀಡಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು, ನಮ್ಮ ಬುಟ್ಟಿಯಲ್ಲಿ ಹಾವಿದೆಯೋ ಲಕ್ಷ್ಮಿ ಪಟಾಕಿ ಇದೆಯೋ ಸದ್ಯದಲ್ಲೇ ಗೊತ್ತಾಗಲಿದೆ. ಅಲ್ಲಿಯ ತನಕ ಕಾದು ನೋಡಿ […]

ಬಿಜೆಪಿ-ಕಾಂಗ್ರೆಸ್ ನಡುವೆ ಪಾದಯಾತ್ರೆ ಫೈಟ್

ಬೆಂಗಳೂರು, ಜ.5- ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದರೆ, ರಾಜಕೀಯ ಪಕ್ಷಗಳ ನಡುವೆ ಪಾದಯಾತ್ರೆ ಫೈಟ್ ಜೋರಾಗಿದೆ. ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಕಾಂಗ್ರೆಸ್ ಜ.9ರಿಂದ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ನಡೆಸಿಯೇ ಸಿದ್ಧ ಎಂದು ಹಠಕ್ಕೆ ಬಿದ್ದಿದೆ. ಇದರ ನಡುವೆ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪಾದಯಾತ್ರೆ ನಿಲ್ಲಿಸಬೇಕು. ಈಗಾಗಲೇ ಕೋವಿಡ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದು, ಅದು ಪಾದಯಾತ್ರೆಗೂ ಅನ್ವಯಿಸುತ್ತದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಕೊರೊನಾ ಕಠಿಣ ನಿಯಮಗಳು ಜನಸಾಮಾನ್ಯರಿಗೆ ಅನ್ವಯವಾಗುವಂತೆ ಕಾಂಗ್ರೆಸ್ […]