ಚುನಾವಣೆ ಎದುರಿಸಲು ರಾಜ್ಯ ಬಿಜೆಪಿಯಲ್ಲಿ ವರ್ಚಸ್ವಿ ನಾಯಕನ ಕೊರತೆ

ಬೆಂಗಳೂರು,ಡಿ.13- ವಿಧಾನಸಭಾ ಚುನಾವಣೆ ಸನಿಹವಾಗುತ್ತಿದ್ದು ರಾಜ್ಯ ಬಿಜೆಪಿಯಲ್ಲಿ ಜನನಾಯಕನಾಗಿ ವರ್ಚಸ್ಸು ಹೊಂದಿದ ನಾಯಕ ಸಿಗದೆ, ಮಾಸ್ ಲೀಡರ್ ಕೊರತೆ ಕಾಡತೊಡಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೋಡಿ ರಾಜ್ಯದಲ್ಲಿ ಮೋಡಿ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಇಬ್ಬರು ನಾಯಕರೂ ಉತ್ತಮ ಇಮೇಜ್ ಹೊಂದಿದ್ದರೂ ಮಾಸ್ ಇಮೇಜ್ ಗಳಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿರುವುದು ಹೊಸ ಇಕ್ಕಟ್ಟು ಸೃಷ್ಟಿಸಿದೆ. ಪ್ರತಿಪಕ್ಷಗಳ ಪ್ರಬಲ ಚುನಾವಣಾ ತಂತ್ರಗಾರಿಕೆಗೆ ಸದ್ಯದ ಮಟ್ಟಿಗೆ ಆಡಳಿತಾರೂಢ ಬಿಜೆಪಿ ನಾಯಕರಲ್ಲಿ ಟಕ್ಕರ್ ನೀಡಬಲ್ಲ ಶಕ್ತಿ ಬೊಮ್ಮಾಯಿ, […]