ಬಿಜೆಪಿ ಚಿಂತನ-ಮಂಥನ ಸಭೆ: ಸಂಘಟನಾತ್ಮಕ ಸಭೆಯೋ, ಸಂಪುಟ ಸರ್ಜರಿಯೋ..?

ಬೆಂಗಳೂರು,ಜ.3- ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿಯೂ ರಾಜ್ಯ ಬಿಜೆಪಿ ನಿರೀಕ್ಷಿತ ಸಾಧನೆ ತೋರುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ರಂಗಪ್ರವೇಶಕ್ಕೆ ಸಜ್ಜಾಗಿದೆ. ಉತ್ತರ ಭಾರತದ ರಾಜ್ಯಗಳತ್ತ ಚಿತ್ತ ಹರಿಸಿದ್ದ ಬಿಜೆಪಿ ವರಿಷ್ಠರು ಇದೀಗ ಕರ್ನಾಟಕದಲ್ಲಿ ಪಕ್ಷದ ಸಾಧನೆಗೆ ಅಸಮಾಧಾನಗೊಂಡಿದ್ದು, ಕಡೆಗೂ ದಕ್ಷಿಣ ಭಾರತದ ಹೆಬ್ಬಾಗಿಲ ಕಡೆ ದೃಷ್ಟಿ ಹರಿಸಿ ಎರಡು ದಿನಗಳ ಚಿಂತನ-ಮಂಥನಕ್ಕೆ ಸಜ್ಜಾಗಿದ್ದಾರೆ. ಪಕ್ಷ ಸಂಘಟನೆ, ಇತ್ತೀಚಿನ ಚುನಾವಣೆಗಳಲ್ಲಾದ ಹಿನ್ನೆಡೆಗೆ ಕಾರಣ, ಸಂಪುಟದಲ್ಲಿ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ […]

ಜ.8 ಮತ್ತು 9ರಂದು ಬಿಜೆಪಿ ಮಹತ್ವದ ಸಭೆ

ಬೆಂಗಳೂರು,ಜ.1- ಹೊಸ ವರ್ಷದಲ್ಲಿ ಸರ್ಕಾರ ಮತ್ತು ಪಕ್ಷದ ನಡುವೆ ಯಾವುದೇ ರೀತಿಯ ಸಮನ್ವಯತೆ ಉಂಟಾಗದಂತೆ ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಜ.8 ಮತ್ತು 9ರಂದು ಮಹತ್ವದ ಸಭೆ ನಡೆಸಲಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಸುಳಿವು ಬೆನ್ನಲ್ಲೇ ಸಚಿವರ ಜೊತೆ ಸಭೆ ನಡೆಸುತ್ತಿರುವುದು ಕುತೂಹಲ ಮೂಡಿಸಿದೆ. ಬಿಜೆಪಿ ವರಿಷ್ಠರ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಸಚಿವರ ಕಾರ್ಯವೈಖರಿ ಹಾಗೂ ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಯಲಿದೆ ಎಂದು ಹೇಳಲಾಗಿದೆ. ಚುನಾವಣೆ ವರ್ಷ […]