“ನಿಮ್ಮ ಹೋರಾಟ ಯಾರ ವಿರುದ್ಧ ಎಂಬುದನ್ನು ನಿರ್ಧರಿಸಿ ನಂತರ ಪಾದಯಾತ್ರೆ ನಾಟಕಮಾಡಿ” : ಬಿಜೆಪಿ

ಬೆಂಗಳೂರು,ಫೆ.28- ನೀವು ಯಾರ ವಿರುದ್ಧ ಹೋರಾಟ ನಡೆಸಬೇಕೆಂಬುದನ್ನು ಮೊದಲು ನಿರ್ಧರಿಸಿ. ಆ ಮೇಲೆ ಪಾದಯಾತ್ರೆ ನಾಟಕ ಮುಂದುವರಿಸಿ ಎಂದು ಕಾಂಗ್ರೆಸ್ ನಡೆಸುತ್ತಿರುವ 2ನೇ ಹಂತದ ಮೇಕೆದಾಟು ಪಾದಯಾತ್ರೆಗೆ ಬಿಜೆಪಿ ವ್ಯಂಗ್ಯವಾಡಿದೆ. ಮೇಕೆದಾಟು ಪಾದಯಾತ್ರೆ ಎಂಬುದು ಈಗ ಡಿ.ಕೆ. ಶಿವಕುಮಾರ್ ಅವರಿಗೆ ವ್ಯಕ್ತಿತ್ವ ವಿಕಸನ ಶಿಬಿರವಾಗಿ ಪರಿಣಮಿಸಿದೆ. ಮೂವತ್ತು ದಿನದಲ್ಲಿ ಇಂಗ್ಲೀಷ್ ಕಲಿಯುವುದು ಹೇಗೆ? ಎಂಬಂತಹ ಪುಸ್ತಕಗಳ ರೀತಿಯಲ್ಲಿ ಪಾದಯಾತ್ರೆ ಮೂಲಕ ನಾಯಕರಾಗಿ ಎಂಬ ಪುಸ್ತಕ ಬರೆಯಬಹುದೇನೋ ಎಂದು ಲೇವಡಿ ಮಾಡಿದೆ. ಕಾವೇರಿ ನೀರಿನ ಪ್ರತಿ ಹನಿಯಲ್ಲೂ ಈ […]