ಗುಜರಾತ್ ಗೆಲುವಿನ ಜೋಶ್‌ನಲ್ಲಿ ರಾಜ್ಯ ಬಿಜೆಪಿ ಹೊಸ ಗೇಮ್ ಪ್ಲಾನ್

ಬೆಂಗಳೂರು,ಡಿ.9- ನಿರೀಕ್ಷೆಗೂ ಮೀರಿದ ಫಲಿತಾಂಶ ಗುಜರಾತ್‍ನಲ್ಲಿ ಬಂದಿರುವ ಕಾರಣ ಆಡಳಿತ ವಿರೋಧಿ ಅಲೆಯನ್ನು ಮರೆಮಾಚಲು ರಾಜ್ಯದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುವ ಮಾತುಗಳು ಕೇಳಿಬರುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಿನ ಲೆಕ್ಕಾಚಾರದ ಪ್ರಕಾರ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಚುನಾವಣಾ ಆಯೋಗ ದಿನಾಂಕ ಘೋಷಿಸಿದರೆ ಮೇ 2ನೇ ವಾರದಲ್ಲಿ ಮತದಾನ ನಡೆದು ಫಲಿತಾಂಶ ಪ್ರಕಟವಾಗಬೇಕು. ಸದ್ಯ ಆಡಳಿತಾರೂಢ ಬಿಜೆಪಿಗೆ ರಾಜ್ಯದಲ್ಲಿ ಸಾಕಷ್ಟು ಆಡಳಿತ ವಿರೋಧಿ ಅಲೆ ಕೇಳಿಬರುತ್ತಿದೆ. ಸರ್ಕಾರದ ಮೇಲೆ 40% ಕಮೀಷನ್ ಅರೋಪ, ಹಗರಣಗಳು, ಪಿಎಸ್‍ಐ ನೇಮಕಾತಿ, […]