ಬಿಜೆಪಿ ಚಿಂತನ-ಮಂಥನ ಕಾರ್ಯಕ್ರಮದ ಮೇಲೆ ಕೋವಿಡ್ ಕರಿನೆರಳು

ಬೆಂಗಳೂರು,ಜ.5- ರಾಜ್ಯದಲ್ಲಿ ಕೋವಿಡ್ ನಿಯಂತ್ರಿಸಲು ಸರ್ಕಾರ ಇಂದಿನಿಂದಲೇ ಅನ್ವಯವಾಗುವಂತೆ ಹೊಸ ಕಠಿಣ ನಿಯಮಗಳನ್ನು ರೂಪಿಸಿರುವುದರಿಂದ ಬಿಜೆಪಿಯ ಬಹುನಿರೀಕ್ಷಿತ ಚಿಂತನಮಂಥನ ಕಾರ್ಯಕ್ರಮದ ಮೇಲೆ ಕರಿನೆರಳು ಆವರಿಸಿದೆ. ಇದೇ 8 ಮತ್ತು 9ರಂದು ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರನ್ನೊಳಗೊಂಡ ಚಿಂತನ ಬೈಠಕ್ ಎರಡು ದಿನಗಳ ಆಯೋಜಿಸಲಾಗಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, […]