ಚಿತ್ರ ಕಲಾವಿದ ಬಿ.ಕೆ.ಎಸ್.ವರ್ಮ ವಿಧಿವಶ

ಬೆಂಗಳೂರು, ಫೆ.6- ಖ್ಯಾತ ಅಂತರ್ ರಾಷ್ಟ್ರೀಯ ಚಿತ್ರ ಕಲಾವಿದ ಡಾ. ಬಿ.ಕೆ.ಎಸ್. ವರ್ಮಾ (74) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಬಾಣಸವಾಡಿಯಲ್ಲಿ ಅವರು ಕುಟುಂಬ ಸದಸ್ಯರೊಂದಿಗೆ ವಾಸವಾಗಿದ್ದರು. ಇಂದು ಮುಂಜಾನೆ ಅವರಿಗೆ ತೀವ್ರತರವಾದ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಕುಟುಂಬ ಸದಸ್ಯರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಾಗ ಅವರಿಗೆ ಹೃದಯಾಘಾತವಾಗಿರುವುದು ತಿಳಿದು ಬಂದಿದೆ. ವೈದ್ಯರು ಚಿಕಿತ್ಸೆ ನೀಡಿದರೂ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಆನೇಕಲ್‍ನ ಅತ್ತಿಬೆಲೆ ಕರ್ನೂರಿನ ಗ್ರಾಮದಲ್ಲಿ 1949ರಲ್ಲಿ ಜನಿಸಿದ ವರ್ಮಾ ಅವರು ತಮ್ಮ ಆರನೇ ವಯಸ್ಸಿನಲ್ಲಿ […]