ಉದ್ದೇಶ ಪೂರ್ವಕ ವರ್ಗಾವಣೆ ಖಂಡಿಸಿ ಬಿಬಿಎಂಪಿ ಸಿಬ್ಬಂದಿಗಳಿಂದ ಕರಾಳ ದಿನಾಚರಣೆ

ಬೆಂಗಳೂರು, ಅ.31-ಅರ್ಹತೆ ಇಲ್ಲದ ಅಧಿಕಾರಿಗಳನ್ನು ಉದ್ದೇಶ ಪೂರಕವಾಗಿ ಬಿಬಿಎಂಪಿಗೆ ವರ್ಗಾವಣೆ ಮಾಡುತ್ತೀರುವ ಕ್ರಮ ಖಂಡಿಸಿ ಇಂದು ಬಿಬಿಎಂಪಿ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡುವ ಮೂಲಕ ಕರಾಳದಿನ ಆಚರಿಸಿ ಆಕ್ರೋಶ ಹೊರಹಾಕಿದರು. ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ಎಂಟು ವಲಯಗಳಲ್ಲಿ ಸಿಬ್ಬಂದಿ ಕೈಗಳಿಗೆ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಣೆ ಮಾಡುವ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಕರೆ ನೀಡಿದ್ದ ಹೋರಾಟಕ್ಕೆ ಬೆಂಬಲಿಸಿದರು. ಇತ್ತೀಚಿಗೆ ಬಿಬಿಎಂಪಿ ದಕ್ಷಿಣ […]