ಮಗುವಿಗೆ ಜನ್ಮ ನೀಡಿದ ತೃತಿಯಲಿಂಗಿ, ಭಾರತದಲ್ಲಿ ಇದೆ ಮೊದಲು

ತಿರುವನಂತಪುರಂ,ಫೆ.9- ಕೇರಳದಲ್ಲಿ ತೃತಿಯಲಿಂಗಿ ದಂಪತಿ ಮಗುವಿಗೆ ಜನ್ಮ ನೀಡಿದ್ದಾರೆ. ತೃತಿಯಲಿಂಗಿಗಳಿಗೆ ಮಗು ಜನಿಸಿರುವುದು ಭಾರತದಲ್ಲಿ ಇದೆ ಮೊದಲು ಎನ್ನಲಾಗಿದೆ. ತಿರುವಂತನಪುರಂನ ಸರ್ಕಾರಿ ಆಸ್ಪತ್ರೆಯಲ್ಲಿ ತೃತಿಯ ಲಿಂಗಿ ದಂಪತಿಗೆ ಮಗು ಜನಿಸಿದ್ದು, ಹುಟ್ಟಿರುವ ಮಗುವಿನ ಲಿಂಗದ ಗುರುತು ಬಹಿರಂಗಪಡಿಸಲು ದಂಪತಿ ನಿರಾಕರಿಸಿದ್ದಾರೆ. ಮಗುವಾಗಿರುವ ವಿಷಯವನ್ನು ಬಹಿರಂಗಪಡಿಸಿರುವ ಜಹಾದ್ ಮತ್ತು ಜಿಯಾ ದಂಪತಿ ಇದು ನಮ್ಮ ಜೀವನದ ಅತ್ಯಂತ ಸಂತೋಷದ ದಿನ. ನನಗೆ ನೋವುಂಟು ಮಾಡುವ ಹಲವಾರು ಸಂದೇಶಗಳು ನನಗೆ ಬಂದಿವೆ. ನಮ್ಮ ಮಗುವಿನ ಜನನವು ಅವರಿಗೆ ನಮ್ಮ ಉತ್ತರವಾಗಿದೆ. […]