ವರ್ಷಾರಂಭದ ದಿನ: ದೇವಸ್ಥಾನಗಳಲ್ಲಿ ಭಕ್ತರ ದಂಡು

ಬೆಂಗಳೂರು, ಜ.1- ಏರಿಕೆಯಾಗುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳು, ಓಮಿಕ್ರಾನ್ ವೈರಸ್‍ನ ಆತಂಕದ ನಡುವೆಯೂ ಹೊಸ ವರ್ಷದ ಆರಂಭದ ದಿನವಾದ ಇಂದು ಜನ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನಗಳು ಜರುಗಿದವು. ಎಲ್ಲೆಡೆ ಕೊರೊನಾ ನಿಯಂತ್ರಣ ಮಾರ್ಗಸೂಚಿ, ಕಟ್ಟುಪಾಡುಗಳನ್ನು ಬಿಗಿಗೊಳಿಸಲಾಗಿತ್ತಾದರೂ ಸ್ವಯಂ ನಿಯಂತ್ರಣದೊಂದಿಗೆ ಜನ ರಾಜ್ಯದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮೈಸೂರಿನ ಚಾಮುಂಡಿಬೆಟ್ಟ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ, ಕೋಲಾರದ ಚಿಕ್ಕ ತಿರುಪತಿ, ಕೋಟಿ […]