ಮಿತಿಮೀರಿದ ಕೋವಿಡ್ ಕೇಸ್, ಚೀನಾದಲ್ಲಿ ರಕ್ತಕ್ಕಾಗಿ ಹಾಹಾಕಾರ

ನವದೆಹಲಿ,ಡಿ.26- ಕೋವಿಡ್ ಸೋಂಕಿನ ಪ್ರಕರಣಗಳ ತೀವ್ರ ಹೆಚ್ಚಳದ ನಡುವೆ ಚೀನಾದಲ್ಲಿ ರಕ್ತದ ಕೊರತೆ ಎದುರಾಗಿರುವುದು ಮತ್ತಷ್ಟು ಆತಂಕಗಳನ್ನು ಸೃಷ್ಟಿಸಿದೆ. ವೈಯಕ್ತಿಕ ಸುರಕ್ಷತೆಯ ಖಾತ್ರಿಯೊಂದಿಗೆ ರಕ್ತ ದಾನ ಮಾಡಲು ಜನ ಮುಂದೆ ಬರಬೇಕು ಎಂದು ಚೀನಾ ಸರ್ಕಾರ ಮನವಿ ಮಾಡಿದೆ. ಕೋವಿಡ್ ಪ್ರಕರಣಗಳು ಹಾಗೂ ಶೀತವಾತಾವರಣದಿಂದ ರಕ್ತದ ಬೇಡಿಕೆ ಹೆಚ್ಚಾಗಿದೆ ಎಂದು ಸರಳವಾಗಿ ವಿಷಯ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿದೆ. ಆದರೆ, ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಕೋವಿಡ್ ರೂಪಾಂತರಿ ಯಾವ ರೀತಿಯಲ್ಲಿದೆ ಎಂದು ಅಂದಾಜಿಸಲು ಕಷ್ಟವಾಗುತ್ತಿದೆ. […]