ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಬಿಎಂಟಿಸಿ ವೋಲ್ವೋ ಬಸ್‍ ಪ್ರಾಯೋಗಿಕ ಸಂಚಾರ

ಬೆಂಗಳೂರು,ಮಾ.21- ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು -ಚಿಕ್ಕಬಳ್ಳಾಪುರಕ್ಕೆ ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ )ಯ ವೋಲ್ವೋ ಎರಡು ಹವಾನಿಯಂತ್ರಿತ ಬಸ್‍ಗಳ ಪ್ರಾಯೋಗಿಕ ಸಂಚಾರ ಆರಂಭವಾಗಿದೆ.ಹಲವು ಸರಣಿ ಸಭೆಗಳ ನಮತರ ಕೊನೆಗೂ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ಸಂಚಾರದಿಂದ ಒತ್ತಡ ತಪ್ಪಲಿದೆ ಇತ್ತೀಚೆಗೆ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಬೇಡಿಕೆಯನ್ನು ಮನ್ನಿಸಿ ಬಿಎಂಟಿಸಿ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಬ್ಬಾಳ, ಯಲಹಂಕ ,ದೇವನಹಳ್ಳಿ ಮೂಲಕ ಚಿಕ್ಕಬಳ್ಳಾಪುರಕ್ಕೆ ಹವಾನಿಯಂತ್ರಿತ ವೋಲ್ವೋ ಬಸ್‍ಗಳು ಸಂಚರಿಸಲಿವೆ ಪ್ರಸ್ತುತ ಈಗ ಪ್ರತಿ ಬಸ್ […]

ಬಿಎಂಟಿಸಿ ಚಾಲಕನ ಆತ್ಮಹತ್ಯೆ ಸುತ್ತ ಅನುಮಾನದ ಹುತ್ತ

ಬೆಂಗಳೂರು, ಜ.31- ಲಾಡ್ಜ್ವೊಂದರಲ್ಲಿ ಬಿಎಂಟಿಸಿ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಹಲವಾರು ಅನುಮಾನ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಕೆಂಗೇರಿ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಚನ್ನಪಟ್ಟಣ ಮೂಲದ ಪುಟ್ಟೇಗೌಡ(28) ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೊರ ಬಂದಿದ್ದು, ಮಲ್ನಾಡ್ ಲಾಡ್ಜ್ಗೆ ಏಕೆ ಬಂದಿದ್ದ, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪುಟ್ಟೇಗೌಡನ ಮೊಬೈಲ್ಗೆ ಬಂದಿರುವ ಕರೆಗಳ ಬಗ್ಗೆಯೂ ಪೊಲೀಸರು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಕೆಂಗೇರಿ […]

ಕಿಲ್ಲರ್ ಬಿಎಂಟಿಸಿಗೆ ಮತ್ತೊಬ್ಬ ಬೈಕ್ ಸವಾರ ಬಲಿ

ಬೆಂಗಳೂರು, ಜ.18- ಮುಂದೆ ಹೋಗುತ್ತಿದ್ದ ಸ್ಕೂಟರ್ಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ವಿಜಯನಗರದ ನಿವಾಸಿ ಕುಲದೀಪ್ ಬಗರೇಚಾ(31) ಮೃತಪಟ್ಟ ಸ್ಕೂಟರ್ ಸವಾರ. ಉದ್ಯಮಿಯಾಗಿದ್ದ ಕುಲದೀಪ್ ಅವರು ಇಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ತಮ್ಮ ಸ್ಕೂಟರ್ನಲ್ಲಿ ಸುಮನಹಳ್ಳಿ ಬ್ರಿಡ್ಜ್ ಬಳಿ ಹೋಗುತ್ತಿದ್ದಾಗ ಹಿಂದಿನಿಂದ ಅತಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಒಂದೇ ಕ್ಷೇತ್ರದಲ್ಲಿ […]

ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್-ಹಣ ಎಗರಿಸುತ್ತಿದ್ದ 6 ಮಂದಿ ಖಾಕಿ ಬಲೆಗೆ

ಬೆಂಗಳೂರು,ಜ.14- ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಕರ ಮೊಬೈಲ್ ಹಾಗೂ ಹಣ ಕಳ್ಳತನ ಮಾಡುತ್ತಿದ್ದ ಮತ್ತು ಕಳವು ಮಾಲು ಸ್ವೀಕರಿಸುತ್ತಿದ್ದ ಆರು ಮಂದಿಯನ್ನು ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿ30 ಲಕ್ಷ ರೂ. ಬೆಲೆಯ 150 ಮೊಬೈಲ್ ಫೋನ್ ಹಾಗೂ 25 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಜಾಫರ್ ಸಿದ್ದಿಕ್ ಅಲಿಯಾಸ್ ಜಾಫರ್ (26), ಸೈಯದ್ ಅಖಿಲ್ ಅಲಿಯಾಸ್ ಸಮೀರ್ (40), ರೆಹಮಾನ್ ಶರೀಫ್ (42), ಮುಸ್ತಾಕ್ ಅಹಮದ್ ಅಲಿಯಾಸ್ ಮುಸ್ತಾಕ್ ಅಲಿಯಾಸ್ ಮುಸ್ತಿ (45), ಇಮ್ರಾನ್ ಪಾಷಾ (34) ಮತ್ತು ರಫೀಕ್ […]

ಮತ್ತಷ್ಟು ದುಬಾರಿಯಾಗಲಿದೆ ಬಿಎಂಟಿಸಿ ಪ್ರಯಾಣ.. ?

ಬೆಂಗಳೂರು,ಡಿ.30- ಇಂಧನ ಬೆಲೆ ಏರಿಕೆ ಹಾಗೂ ಇತರೆ ನಿರ್ವಹಣಾ ವೆಚ್ಚದಿಂದ ಎದುರಾಗುತ್ತಿರುವ ನಷ್ಟವನ್ನು ಸರಿದೂಗಿಸಲು ಹೊಸ ವರ್ಷದಲ್ಲಿ ಬಿಎಂಟಿಸಿ ಪ್ರಯಾಣಿಕರ ಟಿಕೆಟ್ ದರ ಹೆಚ್ಚಿಸಲು ನಿರ್ಧರಿಸಿದೆ. ಇದೇ ವೇಳೆ ಪಾಸ್ ವ್ಯವಸ್ಥೆಯಲ್ಲೂ ಕೂಡ ಕೆಲವೊಂದು ರಿಯಾಯ್ತಿಯಲ್ಲಿ ಕಡಿತಗೊಳಿಸಲು ಈಗಾಗಲೇ ಅಧಿಕಾರಿಗಳು ಸಭೆ ನಡೆಸಿ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಮಾಸಿಕ ಬಸ್ ಪಾಸ್ಗಳ ದರವು ಕೂಡ ಹೆಚ್ಚಾಗಲಿದ್ದು, ಕನಿಷ್ಠ 5ರಿಂದ 10ರೂ.ಗೆ ಏರಿಕೆಯಾದರೆ, ಟಿಕೆಟ್ ದರ 1ರಿಂದ 2ರೂ.ಗೆ ಹೆಚ್ಚಳವಾಗಬಹುದು ಎಂದು ಮೂಲಗಳು ತಿಳಿಸಿವೆ. ಹೊಸ ವರ್ಷಕ್ಕೆ […]

ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್..!

ಚಿಕ್ಕಬಳ್ಳಾಪುರ,ಡಿ.17-ಜನತೆಗೆ ಹೊಸ ವರ್ಷದ ಕೊಡುಗೆಯಾಗಿ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ವಿಸ್ತರಣೆಯಾಗಲಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದ ಬಿಎಂಟಿಸಿ ಬಸ್ ಜನವರಿ ಮೊದಲ ವಾರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೂ ಆಗಮಿಸಲಿದೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಜನವರಿ ಮೊದಲ ವಾರದಲ್ಲಿ ಬಿಎಂಟಿಸಿ ಬಸ್ ವಿಸ್ತರಣೆ ಆಗುವ ಬಗ್ಗೆ ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾಹಿತಿ ನೀಡಿದ್ದಾರೆ. ಜಿಲ್ಲೆಯ ಜನತೆಗೆ ಬಹುನಿರೀಕ್ಷಿತ ಬೇಡಿಕೆಯಾಗಿದ್ದ ಬಿಎಂಟಿಸಿ ಬಸ್ಸುಗಳನ್ನ ಹೊಸ ವರ್ಷ ಜನವರಿ ಮೊದಲ ವಾರದಲ್ಲಿ ಚಿಕ್ಕಬಳ್ಳಾಪುರಕ್ಕೂ ವಿಸ್ತರಿಸಲಾಗುವುದು ತನ್ನ ಕಾರ್ಯ […]