ಬಿಎಂಟಿಸಿ ಬಸ್ ಡಿಕ್ಕಿ, ಡೆಲಿವರಿ ಬಾಯ್ ಸಾವು
ಬೆಂಗಳೂರು,ಜ.24- ಬಿಎಂಟಿಸಿ ಬಸ್ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಫುಡ್ ಡೆಲಿವರಿ ಬಾಯ್ ಮೃತಪಟ್ಟಿರುವ ಘಟನೆ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಲಕ್ಷ್ಮಿದೇವಿನಗರದ ನಿವಾಸಿ ಸುರೇಶ್ಬಾಬು (45) ಮೃತಪಟ್ಟವರು. ಚಾಮರಾಜನಗರ ಮೂಲದ ಸುರೇಶ್ಬಾಬು ಅವರು ನಗರದಲ್ಲಿ ಫುಡ್ ಡೆಲಿವರಿಬಾಯ್ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ 6.45ರ ಸುಮಾರಿನಲ್ಲಿ ಮಾರ್ಗೋಸಾ ರಸ್ತೆಯ 17ನೆ ಕ್ರಾಸ್ನಲ್ಲಿ ಸುರೇಶ್ಬಾಬು ಬೈಕ್ನಲ್ಲಿ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ನೆಲಮಂಗಲ ಕಡೆಯಿಂದ ಮೆಜಸ್ಟಿಕ್ಗೆ ಬರುತ್ತಿದ್ದ ಬಿಎಂಟಿಸಿ ಬಸ್ ನಿಯಂತ್ರಣ […]