ರಸ್ತೆ ಸ್ಟ್ರಿಪ್ಸ್ ತಂದ ಅವಾಂತರ : ಬೈಕ್‍ಗೆ BMTC ಬಸ್ ಡಿಕ್ಕಿಯಾಗಿ ಸವಾರ ಸಾವು

ಬೆಂಗಳೂರು,ನ.3- ವಾಹನಗಳ ವೇಗ ಮಿತಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ರಸ್ತೆಗೆ ಅಳವಡಿಸಿರುವ ಸ್ಟ್ರಿಪ್ಸ್‍ಗೆ ಜೀವವೊಂದು ಬಲಿಯಾಗಿದೆ.ಈ ಹಿಂದೆ ರಸ್ತೆ ಗುಂಡಿಯಿಂದಾಗಿ ಅಮಾಯಕ ವಾಹನ ಸವಾರರು ಪ್ರಾಣ ಕಳೆದುಕೊಂಡಿದ್ದರು. ಇದೀಗ ಸ್ಟ್ರಿಪ್ಸ್‍ನಿಂದಾಗಿ ಬೈಕ್ ಸವಾರನ ಜೀವ ಹೋಗಿರುವುದು ದುರ್ದೈವ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ರಾತ್ರಿ ಬಿಎಂಟಿಸಿ ಬಸ್ ಅತಿವೇಗವಾಗಿ ಬಂದು ಮುಂದೆ ಹೋಗುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದ ಸವಾರ ಮೇಲೆ ಚಕ್ರ ಹರಿದ ಪರಿಣಾಮ ಸವಾರ ಮೃತಪಟ್ಟಿದ್ದಾರೆ. ಲಗ್ಗೆರೆ ನಿವಾಸಿ […]