ಬಿಎಂಟಿಸಿ ಪ್ರಯಾಣಿಕರೇ ಹುಷಾರ್, ನಿಮಗಾಗಿ ಕಾಯುತ್ತಿದ್ದಾರೆ ಸ್ಮಾರ್ಟ್ ಕಳ್ಳಿಯರು..!

ಬೆಂಗಳೂರು,ಫೆ.26- ಮಹಿಳೆ ಗಮನ ಬೇರೆಡೆ ಸೆಳೆದು ಮೂವರು ಕಳ್ಳಿಯರು ಪರ್ಸ್‍ನಲ್ಲಿದ್ದ 6.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಗಮನ ಬೇರೆಡೆ ಸೆಳೆದು ಅವರ ಪರ್ಸ್‍ನಲ್ಲಿದ್ದ ಹಣ, ಆಭರಣ ಕಳ್ಳತನ ಮಾಡಿದ್ದಾರೆ. ಫೆ.20ರಂದು ನಾಗರಾಬಾವಿಯ ಪಾಪರೆಡ್ಡಿಪಾಳ್ಯದ ನಿವಾಸಿ ವಾಣಿಮಂಜುನಾಥ್ ಎಂಬುವರು ತಮ್ಮ 4 ವರ್ಷದ ಮಗುವಿನೊಂದಿಗೆ ಸಂಬಂಕರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಆರ್‍ಎಂಸಿಯಾರ್ಡ್ ಬಸ್ ನಿಲ್ದಾಣದಲ್ಲಿ ಕೆಂಗೇರಿ ಕಡೆಗೆ ತೆರಳುವ ಬಿಎಂಟಿಸಿ ಬಸ್ […]