360 ಕೋಟಿ ಮೌಲ್ಯದ ಡ್ರಗ್ಸ್ ವಶ

ಅಹಮದಾಬಾದ್,ಅ. 8 (ಪಿಟಿಐ) – ಮಾದಕ ದ್ರವ್ಯ ಸಾಗಿಸುತ್ತಿದ್ದ ಪಾಕ್ ಮೂಲದ ದೋಣಿಯನ್ನು ವಶಕ್ಕೆ ಪಡೆದಿರುವ ಕರಾವಳಿ ಭದ್ರತಾ ಪಡೆ ಹಾಗೂ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು 360 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಪಾಕ್ ಮೂಲಕ ಭಾರತಕ್ಕೆ ಮಾದಕ ದ್ರವ್ಯ ಸರಬರಾಜು ಮಾಡಲಾಗುತ್ತಿದೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿದ ಕರಾವಳಿ ಭದ್ರತಾ ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಅರಬ್ಬಿ ಸಮುದ್ರ ಮಾರ್ಗದ ಮೇಲೆ ಹದ್ದಿನಕಣ್ಣಿಟ್ಟು ಕಾಯುತ್ತಿದ್ದರು. […]

ಅಕ್ರಮವಾಗಿ ಅಮೇರಿಕಾಗೆ ತೆರಳುತ್ತಿದ್ದ ವಲಸಿಗರ ದೋಣಿ ಮುಳುಗಿ ಇಬ್ಬರ ಸಾವು

ಫ್ಲೋರಿಡಾ (ಅಮೇರಿಕ),ಆ.7- ಫ್ಲೋರಿಡಾ ಕೀಸ್ ಕರಾವಳಿ ಮೂಲಕ ಅಕ್ರಮವಾಗಿ ಅಮೇರಿಕಾ ಪ್ರವೇಶಿಸಲು ವಲಸಿಗರಿದ್ದ ದೋಣಿ ಸಮುದ್ರದಲ್ಲಿ ಮುಳುಗಿದ ಪರಿಣಾಮ ಇಬ್ಬರು ಸಾವನ್ನಪ್ಪಿ 5 ಜನರು ನಾಪತ್ತೆಯಾಗಿದ್ದಾರೆ. ಕಡಲತೀರದ ಸಮೀಪವೇ ಈ ದುರಂತ ಸಂಭವಿಸಿದ್ದು, ಅಮೇರಿಕದ ಕರಾವಳಿ ಕಾವಲುಪಡೆ ತಕ್ಷಣ ಅವರನ್ನು ರಕ್ಷಿಸಲು ಮುಂದಾಗಿ ಹಲವರ ಜೀವ ಉಳಿಸಿದ್ದಾರೆ. ನಾಡದೋಣಿಯಲ್ಲಿ ಸುಮಾರು 15 ವಲಸಿಗರು ಅಕ್ರಮವಾಗಿ ಅಮೇರಿಕ ಪ್ರವೇಶಕ್ಕೆ ಬರುವಾಗ ಅಲೆಗಳ ಅಬ್ಬರಕ್ಕೆ ದೋಣಿ ಮುಗುಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಈ ವಲಸಿಗರು ಯಾವ […]