ನೇಣು ಬಿಗಿದುಕೊಂಡು ಬಾಡಿ ಬಿಲ್ಡರ್ ಆತ್ಮಹತ್ಯೆ

ಬೆಂಗಳೂರು,ಜ.11- ಡಿ ಫಾರ್ಮ್ ವ್ಯಾಸಂಗ ಮಾಡುತ್ತಿದ್ದ ಬಾಡಿ ಬಿಲ್ಡರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಕೋಲಾರದ ಶ್ರೀನಿವಾಸಪುರ ನಿವಾಸಿ ಶ್ರೀನಾಥ್(25) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಡಿ ಫಾರ್ಮ್ ವ್ಯಾಸಂಗ ಮಾಡುತ್ತಿದ್ದ ಶ್ರೀನಾಥ್ ವಿದ್ಯಾಭ್ಯಾಸದ ಜೊತೆಗೆ ದೇಹದಾಢ್ರ್ಯ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಿದ್ದನು. ಕೆಆರ್‍ಪುರದ ಹೀರಂಡಹಳ್ಳಿಯಲ್ಲಿ ರೂಮ್ ಮಾಡಿಕೊಂಡು ವಾಸವಾಗಿದ್ದನು. ನಿನ್ನೆ ಶ್ರೀನಾಥ್ ತನ್ನ ರೂಮ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಸ್ನೇಹಿತ ರೂಮ್ ಬಳಿ […]