ವಿದೇಶಿ ಪೈಲಟ್‍ಗಳ ಮೊರೆ ಹೋದ ಏರ್ ಇಂಡಿಯಾ..!

ದನವದೆಹಲಿ,ನ.22- ಎದುರಾಗಿರುವ ಪೈಲಟ್‍ಗಳ ಕೊರತೆ ನೀಗಿಸಿಕೊಳ್ಳಲು ವಿದೇಶಿ ಪೈಲಟ್‍ಗಳನ್ನು ನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ತೀರ್ಮಾನಿಸಿದೆ ಎಂದು ವರದಿಯಾಗಿದೆ. ಟಾಟಾ ಸಮೂಹದ ಒಡೆತನದ ಏರ್ ಇಂಡಿಯಾ ಸಂಸ್ಥೆ ವಿಶಾಲವಾಗಿರುವ ಬೋಯಿಂಗ್ 777 ವಿಮಾನಗಳ ಹಾರಾಟ ಮಾಡುವ ಪೈಲಟ್‍ಗಳ ಕೊರತೆ ಎದುರಿಸುತ್ತಿರುವುದರಿಂದ ವಿದೇಶಿ ಪೈಲಟ್‍ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ ಎಂದು ತಿಳಿದುಬಂದಿದೆ. ವಿಶಾಲವಾದ ಬೋಯಿಂಗ್ 777 ವಿಮಾನಗಳ ಹಾರಾಟಕ್ಕೆ ಸುಮಾರು 100 ವಿದೇಶಿ ಪೈಲಟ್‍ಗಳನ್ನು ನಿಯೋಜಿಸಲು ಬಯಸಿದ್ದು, ಈ ಕುರಿತಂತೆ ಈಗಾಗಲೇ ಕೆಲವು ಏಜೆನ್ಸಿಗಳನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಆಪ್ ಶಾಸಕನಿಗೆ […]