ರಾಮನಗರದಲ್ಲಿ ಕಾಡಾನೆ ಪ್ರತ್ಯಕ್ಷ

ರಾಮನಗರ, ನ.23- ಹೊರವಲಯದ ರಾಯರದೊಡ್ಡಿ ನಗರದ ಬೋಳಪ್ಪನ ಕೆರೆ ಬಳಿ ಒಂಟಿ ಆನೆಯೊಂದು ಪ್ರತ್ಯಕ್ಷವಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕೆರೆಯಲ್ಲಿ ಬೀಡುಬಿಟ್ಟಿರುವ ಕಾಡಾನೆಯನ್ನು ನೋಡಲು ತಂಡೋಪ ತಂಡವಾಗಿ ಜನ ಸೇರುತ್ತಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಈ ನಡುವೆ ರಾಮನಗರದ ನಗರಸಭೆ ಅಧ್ಯಕ್ಷರ ಪತಿ ಲಕ್ಷ್ಮಿಪತಿ ಅವರು ಆನೆ ಓಡಿಸಲು ಹೋಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಆನೆ ಅಟ್ಟಿಸಿಕೊಂಡು ಬಂದು ಸೊಂಡಿಲಿನಿಂದ ಎಸೆದಿದೆ. ಆದರೂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೈಲಲ್ಲಿ ಹೊಟ್ಟೆ ಬಿರಿಯೋಹಾಗೆ ತಿಂದು 8 ಕೆಜಿ ತೂಕ […]