ಚಳಿಗಾಲದ ಚಂಡಮಾರುತಕ್ಕೆ ಅಮೆರಿಕ ತತ್ತರ, 18 ಮಂದಿ ಸಾವು

ಬಫೆಲೋ (ನ್ಯೂಯಾರ್ಕ್), ಡಿ.25- ಚಳಿಗಾಲದ ಚಂಡಮಾರುತಕ್ಕೆ ಅಮೆರಿಕ ತತ್ತರಗೊಂಡಿದೆ. ಕ್ರಿಸ್‍ಮಸ್ ಮತ್ತು ಹೊಸವರ್ಷದ ಆಚರಣೆಗೆ ಭಾರೀ ಹಿಮದ ಗಾಳಿ ಅಡ್ಡಿಯಾಗಿದ್ದು, ಹಿಮಪಾತ, ಬಿರುಗಾಳಿ, ಮಳೆ ಹಾಗೂ ತೀವ್ರ ಚಳಿಯಿಂದ ಈವರೆಗೆ 18 ಮಂದಿ ಸಾವನ್ನಪ್ಪಿದ್ದಾರೆ. ಹಲವೆಡೆ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಮತ್ತೊಂದು ಆತಂಕ ಎದುರಾಗಿದೆ. ಚಳಿಯ ಚಂಡಮಾರುತ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಬಾಂಬ್ ಸೈಕ್ಲೋನ್ ಎನ್ನುವ ಚಳಿಗಾಲದ ಈ ಚಂಡಮಾರುತ ಅಮೆರಿಕಕ್ಕೆ ಅಪ್ಪಳಿಸಿರುವ ಪರಿಣಾಮ ಕ್ರಿಸ್‍ಮಸ್ ಸಂಭ್ರಮದಲ್ಲಿದ್ದ ಜನರಿಗೆ ಭಾರೀ […]