ಬಾಂಬ್ ತಯಾರಿಕೆ ಮಾಹಿತಿ ಹೊಂದಿದ್ದ ಆರೋಪಿಗಳ ಬಂಧನ

ಚೆನೈ, ನ.12- ಬಾಂಬ್ ತಯಾರಿಕೆಯ ಮಾಹಿತಿ ಹಾಗೂ ಐಸಿಸ್ ಸಂಘಟನೆಯ ಕರ ಪತ್ರ ಹೊಂದಿದ್ದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಇನ್ನಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇರಾಕ್ ಮತ್ತು ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆ ಪರ ಪ್ರಚಾರದ ಕರ ಪತ್ರಗಳನ್ನು ಆರೋಪಿಗಳು ಹೊಂದಿದ್ದರು ಎನ್ನಲಾಗಿದೆ. ಮೂವರು ಆರೋಪಿಗಳು ಅನುಮಾನಾಸ್ಪದವಾಗಿ ಪೊಲೀಸರ ತಪಾಸಣಾ ಕೇಂದ್ರಗಳನ್ನು ತಪ್ಪಿಸಿ ತಿರುಗುತ್ತಿದ್ದರು. ಅವರನ್ನು ಅಡ್ಡ ಹಾಕಿದ ಪೊಲೀಸರು ಹಿಡಿಯಲು ಯತ್ನಿಸಿದಾಗ ಆರೋಪಿಗಳು ಸ್ಥಳದಿಂದ ನುಣಚಿಕೊಂಡು ತಪ್ಪಿಸಿಕೊಂಡಿದ್ದಾರೆ. ಆದರೆ ಆರೋಪಿಗಳು ಹೊಂದಿದ್ದ ಚೀಲವನ್ನು ಕಸಿದುಕೊಳ್ಳುವಲ್ಲಿ ಪೊಲೀಸ್ […]