ಭಾರತದಲ್ಲಿ ಭೀಕರ ದಾಳಿಗೆ ಸಂಚು: ರಷ್ಯಾದಲ್ಲಿ ಉಗ್ರನ ಸೆರೆ

ನವದೆಹಲಿ,ಆ.22- ಭಾರತದಲ್ಲಿ ಪ್ರವಾಸ ಕೈಗೊಂಡು ಆತ್ಮಹತ್ಯೆ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರನನ್ನು ರಷ್ಯಾದ ಭದ್ರತಾ ಸೇವೆಗಳ ಒಕ್ಕೂಟ(ಎಸ್‍ಎಸ್‍ಬಿ) ಬಂಧಿಸಿದೆ. ಈ ಮೂಲಕ ಭಾರೀ ಸಂಚೊಂದರ ಸುಳಿವು ದೊರೆತಿದ್ದು, ದೇಶೀಯ ರಕ್ಷಣೆ ಹಾಗೂ ತನಿಖಾ ತಂಡಗಳು ಎಚ್ಚೆತ್ತುಕೊಂಡಿವೆ. ಭಾರತದ ಆಡಳಿತಾತ್ಮಕ ವೃತ್ತದಲ್ಲಿ ಪ್ರತಿನಿಧಿಯೊಬ್ಬರ ಮೇಲೆ ದಾಳಿ ನಡೆಸುವ ಸಂಚು ನಡೆದಿತ್ತು ಎಂದು ರಷ್ಯಾದ ಕೇಂದ್ರ ತನಿಖಾ ಸಂಸ್ಥೆ ತಿಳಿಸಿದೆ. ಬಂಧಿತನನ್ನು ಇಸ್ಲಾಮಿಕ್ ಸ್ಟೇಟ್‍ನ ಕಾರ್ಯಕರ್ತ ಎಂದು ಹೇಳಲಾಗಿದೆ. ರಷ್ಯಾದಲ್ಲಿ ನಿಷೇಧಗೊಂಡಿರುವ ಈ ಸಂಘಟನೆಯ ಬೆನ್ನತ್ತಿದ ಅಲ್ಲಿನ ತನಿಖಾಕಾಧಿರಿಗಳು […]