ಕೆನಡಾದಲ್ಲಿ ರಿಪು ದಮನ್ ಸಿಂಗ್ ಹತ್ಯೆ

ನವದೆಹಲಿ,ಜು.15- ಏರ್ ಇಂಡಿಯಾ ಬಾಂಬ್ ಪ್ರಕರಣದಲ್ಲಿ ಖುಲಾಸೆಗೊಂಡ ಕೆನಡಾ ಮೂಲದ ಸಿಖ್ ನಾಯಕ ಹಾಗೂ ಉದ್ಯಮಿ ರಿಪು ದಮನ್ ಸಿಂಗ್ ಮಲ್ಲಿಕ್ ಅವರು ಕೆನಡಾದಲ್ಲಿ ಗುಂಡಿನ ದಾಳಿಯಿಂದ ಹತ್ಯೆಯಾಗಿದ್ದಾರೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಸುರ್ರೆ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಹತ್ಯೆ ನಡೆದಿರುವುದಾಗಿ ವರದಿಯಾಗಿದೆ.ಬೆಳಗ್ಗೆ ಸುಮಾರು 9.30ಕ್ಕೆ ಆರ್‍ಸಿಎಂಪಿ ಪೊಲೀಸರು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿ ಹಲವು ಗುಂಡೇಟಿನಿಂದ ಗಾಯಗೊಂಡ ವ್ಯಕ್ತಿಯೊಬ್ಬರು ನರಳುತ್ತಿರುವುದನ್ನು ಕಂಡಿದ್ದಾರೆ. ಅವರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ತುರ್ತು ಆರೋಗ್ಯ […]