ಮಹಾರಾಷ್ಟ್ರ – ಕರ್ನಾಟಕ ನಡುವೆ ಬಸ್ ಸೇವೆ ಬಂದ್

ಬೆಳಗಾವಿ,ಡಿ. 7- ಗಡಿ ವಿವಾದ ಇನ್ನೂ ತಣ್ಣಗಾಗುವಂತೆ ಕಾಣುತ್ತಿಲ್ಲ. ಮತ್ತೆ ಬೆಳಗಾವಿ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ಮುಂದುವರೆದಿದ್ದು, ಬಸ್ ಹಾಗೂ ಲಾರಿಗಳಿಗೆ ಮಸಿ ಬಳಿಯಲಾಗುತ್ತಿದೆ. ಎರಡೂ ರಾಜ್ಯಗಳ ನಡುವೆ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಇಂದು ಬೆಳಗ್ಗೆ ಕೆಎಸ್ಆರ್‌ಟಿಸಿ ಬಸ್ ಸೇವೆಯನ್ನು ನಿಲ್ಲಿಸಲಾಗಿತ್ತು. ಮಧ್ಯಾಹ್ನ ವೇಳೆಗೆ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯೂ ಕೂಡ ಕರ್ನಾಟಕಕ್ಕೆ ಹೋಗುವ ಬಸ್‍ಗಳ ಸೇವೆಯನ್ನು ಸ್ಥಗಿತಗೊಳಿಸಿದೆ. ಇದರ ನಡುವೆ ಎಂಇಎಸ್ ಪುಂಡರು ಬೆಳಗಾವಿಯ ಬಸ್ ಡಿಪೋಗಳಲ್ಲಿ ರಾತ್ರಿ ಕೆಎಸ್ಆರ್‌ಟಿಸಿ ಬಸ್‍ಗಳಿಗೆ ಮಸಿ […]