ಕರವೇ ಪ್ರತಿಭಟನೆ, ಬೆಳಗಾವಿ ಗಡಿ ಉದ್ವಿಗ್ನ

ಬೆಂಗಳೂರು,ಡಿ. 6- ಗಡಿ ವಿವಾದದಿಂದ ಕಾವೇರಿದ ಪರಿಸ್ಥಿತಿಯಲ್ಲಿರುವ ಬೆಳಗಾವಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದ್ದಾರೆ. ಅದರ ಬೆನ್ನಲ್ಲೆ ಮಹಾರಾಷ್ಟ್ರದ ಸಚಿವರು ಇಂದಿನ ಬೆಳಗಾವಿ ಭೇಟಿಯನ್ನು ಮುಂದೂಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಸಚಿವರ ಬೆಳಗಾವಿಯ ಭೇಟಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೇ ಸಂಘರ್ಷಮಯ ವಾತಾವರಣವನ್ನು ನಿರ್ಮಿಸಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಬಾರಿ ಮನವಿ ಮಾಡಿ, ಪ್ರಸ್ತುತ ಸಂದರ್ಭದಲ್ಲಿ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ಸ್ವೀಕಾರರ್ಹವಲ್ಲ. ಗಡಿ ಭಾಗದಲ್ಲಿ ಇದು ಕಾನೂನು ಸುವ್ಯವಸ್ಥೆಗೆ ಭಂಗ ಉಂಟು […]