ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಟೀಮ್ ಇಂಡಿಯಾ

ಅಹಮದಾಬಾದ್, ಮಾ. 13- ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ 4 ನೇ ಪಂದ್ಯವು ಡ್ರಾ ಆಗಿದ್ದು, ಸರಣಿಯಲ್ಲಿ 2-1ಯಿಂದ ಮುನ್ನಡೆ ಪಡೆದಿರುವ ಟೀಮ್ ಇಂಡಿಯಾವು ಸರಣಿಯನ್ನು ಗೆದ್ದುಕೊಂಡಿದೆ. ಐಸಿಸಿ ಆಯೋಜನೆಯ 2ನೇ ಟೆಸ್ಟ್ ಚಾಂಪಿಯನ್‍ಷಿಪ್‍ನ ಫೈನಲ್ ಹಂತಕ್ಕೆ ತಲುಪಲು ಈ ಭಾರತದ ಫಲಿತಾಂಶವು ನಿರ್ಣಾಯಕ ಆಗಿತ್ತಾದರೂ, ನ್ಯೂಜಿಲೆಂಡ್ ವಿರುದ್ಧ ಕ್ರಿಸ್ಟ್ ಚರ್ಚ್‍ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ 2 ವಿಕೆಟ್‍ಗಳಿಂದ ವಿರೋಚಿತ ಸೋಲು ಕಂಡಿದ್ದರಿಂದ ಭಾರತ ತಂಡವು ಸತತ 2ನೇ ಬಾರಿಗೆ ಫೈನಲ್ ಹಂತಕ್ಕೇರಿದೆ. 4ನೇ ಟೆಸ್ಟ್‍ನ ದ್ವಿತೀಯ […]