ಆಡಳಿತ -ಪ್ರತಿಪಕ್ಷಗಳ ರಾಜಕೀಯ ಮೇಲಾಟಕ್ಕೆ ಅಧಿವೇಶನದ ಸಮಯ ವ್ಯರ್ಥ

ನವದೆಹಲಿ, ಜು.28- ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸುತ್ತಿರುವುದು ಸೇರಿದಂತೆ ಹಲವು ಗಂಭೀರ ವಿಷಯಗಳು ಇಂದು ಕೂಡ ಚರ್ಚೆಯಾಗದೆ ಸಂಸತ್ ಕಲಾಪ ಪದೇ ಪದೇ ಮುಂದೂಡಿಕೆಯಾಗಿದೆ. ಜುಲೈ 18ರಿಂದ ಆರಂಭವಾದ ಸಂಸತ್‍ನ ಉಭಯ ಸದನಗಳ ಕಲಾಪದಲ್ಲಿ ಈವರೆಗೂ ಸುಗಮ ಕಲಾಪ ನಡೆದೆ ಇಲ್ಲ. ಪ್ರತಿಪಕ್ಷಗಳಾದ ಕಾಂಗ್ರೆಸ್, ಸಿಪಿಎಂ, ಟಿಎಂಸಿ, ಟಿಎಸ್‍ಆರ್, ಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಸಂಸತ್‍ನಲ್ಲಿ ಹಣದುಬ್ಬರ, ಮೊಸರು ಹಾಗೂ ಇತರ ದಿನ ಬಳಕೆಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸಿರುವುದು, ಸೇನೆಗೆ ಅಗ್ನಿಪಥ್ […]

7 ದಿನಗಳಿಂದ ಪದೇ ಪದೇ ಮುಂದೂಡಿಕೆಯಾಗುತ್ತಲೇ ಇದೆ ಸಂಸತ್ ಅಧಿವೇಶನ

ನವದೆಹಲಿ, ಜು.27- ಕಳೆದ ಏಳು ದಿನಗಳಿಂದ ಆರಂಭವಾಗಿರುವ ಸಂಸತ್ ಅಧಿವೇಶನ ಯಾವುದೇ ಫಲಪ್ರದ ಚರ್ಚೆಯಾಗದೆ ಪದೇ ಪದೇ ಮುಂದೂಡಿಕೆಯಾಗುತ್ತಿದ್ದು, ಇಂದು ಕೂಡ ಮಧ್ಯಾಹ್ನದವರೆಗೂ ಯಾವುದೇ ಕಲಾಪ ನಡೆಯದೆ ಸಮಯ ವ್ಯರ್ಥವಾಗಿದೆ. ಜುಲೈ 18 ರಿಂದ ಆರಂಭವಾಗಿರುವ ಕಲಾಪದಲ್ಲಿ ಈವರೆಗೂ 19 ಮಂದಿ ರಾಜ್ಯಸಭೆ ಸದಸ್ಯರು, ನಾಲ್ವರು ಲೋಕಸಭೆ ಸಂಸದರನ್ನು ಅಮಾನತುಗೊಳಿಸಲಾಗಿದೆ. ಬೆಲೆ ಏರಿಕೆ ಮತ್ತು ಆಹಾರ ಪದಾರ್ಥಗಳ ಮೇಲೆ ಜಿಎಸ್‍ಟಿ ವಿಧಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿದ್ದು, ಗದ್ದಲ-ಕೋಲಾಹಲ ನಿರ್ಮಿಸಿವೆ. ಇದಕ್ಕಾಗಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ […]