ಆಟವಾಡುತ್ತಿದ್ದಾಗ ನಾಡ ಬಂದೂಕಿನಿಂದ ಗುಂಡು ಹಾರಿ ಬಾಲಕ ಸಾವು

ಕನಕಪುರ,ಡಿ.18- ತೋಟದ ಮನೆಯಲ್ಲಿ ಇಟ್ಟಿದ್ದ ನಾಡ ಬಂದೂಕನ್ನು ತೆಗೆದುಕೊಂಡು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಗುಂಡು ಹಾರಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಶಿವನಹಳ್ಳಿಯಲ್ಲಿ ನಡೆದಿದೆ. ಶೂಟೌಟ್ನಲ್ಲಿ ಸಾವನ್ನಪ್ಪಿರುವ ಬಾಲಕನನ್ನು ಶಮಾ(7) ಎಂದು ಗುರುತಿಸಲಾಗಿದೆ. ಕಾಡುಶಿವನಹಳ್ಳಿಯ ಮಲ್ಲೇಶ್ ಎಂಬವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಕುಟುಂಬವೊಂದು ಅಲ್ಲೇ ನೆಲೆಸಿತ್ತು. ತಂದೆ-ತಾಯಿ ಇಬ್ಬರು ತೋಟದಲ್ಲಿ ಕೆಲಸ ಮಾಡುವ ವೇಳೆ ಇವರ ಮಕ್ಕಳು ತೋಟದ ಮನೆಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಆಟವಾಡುತ್ತಿದ್ದಾಗ ಸಹೋದರ ಟ್ರಿಗರ್ ಒತ್ತಿದಾಗ ಗುಂಡು ಹಾರಿ ಶಮಾಗೆ […]