ಪ್ರಧಾನಿ ಮೋದಿ ರಕ್ಷಣಾ ಪಡೆಗೆ ಮುಧೋಳ ತಳಿ ನಾಯಿ ಸೇರ್ಪಡೆ

ಬೆಂಗಳೂರು,ಆ.21- ಪ್ರಧಾನಮಂತ್ರಿ ಸೇರಿದಂತೆ ಗಣ್ಯರಿಗೆ ಒದಗಿಸುವ ವಿಶೇಷ ರಕ್ಷಣಾ ಪಡೆ(ಎಸ್‍ಪಿಜಿ)ಗೆ ಕರ್ನಾಟಕದ ದೇಶಿ ತಳಿ ಮುಧೋಳ ನಾಯಿ ಸೇರ್ಪಡೆಯಾಗಲಿದೆ. ಮುಧೋಳ ಹೌಂಡ್ ತಳಿ ಈ ಮೊದಲು ಭಾರತೀಯ ಸೇನೆ, ಭಾರತೀಯ ವಾಯುಪಡೆ, ಕೇಂದ್ರ ಸಶಸ್ತ್ರ ಮೀಸಲು ಅರೆಸೇನಾ ಪಡೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ, ರಾಜ್ಯ ಪೊಲೀಸ್ ಮತ್ತು ಅರಣ್ಯ ಇಲಾಖೆಯ ಪಡೆಗಳಲ್ಲಿ ಮುಧೋಳ ತಳಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಎಸ್‍ಪಿಜಿ ದೇಶದಲ್ಲಿ ವಿಶೇಷ ಎಂದು ಗುರುತಿಸಿಕೊಂಡಿದ್ದು, ಉತ್ಕøಷ್ಟ ಸೇವೆಗೆ ಹೆಸರಾಗಿದೆ. ಎಸ್‍ಪಿಜಿಯ ಅಧಿಕಾರಿಗಳು ಮುಧೋಳ ತಳಿಯ […]