ಆರತಕ್ಷತೆ ವೇಳೆಯೇ ವಧುವಿನ ಬ್ರೈನ್ ಡೆಡ್, ದುಃಖದಲ್ಲೂ ಪೋಷಕರಿಂದ ಸಾರ್ಥಕ ನಿರ್ಧಾರ..!
ಬೆಂಗಳೂರು/ಕೋಲಾರ.ಫೆ.12- ಈ ನವವಧುವಿನ ಬಾಳಲ್ಲಿ ವಿಧಿ ಚೆಲ್ಲಾಟವಾಡಿದೆ. ಮದುವೆಯ ಆರತಕ್ಷತೆ ವೇಳೆಯೇ ಕುಸಿದು ಬಿದ್ದ ನವವಧುವಿನ ಬ್ರೈನ್ ಡೆಡ್ ಆಗಿದೆ. ಸಹಸ್ರಾರು ಕನಸುಗಳನ್ನು ಹೊತ್ತು ಇನ್ನೇನು ಸಪ್ತಪದಿ ತುಳಿಯಬೇಕು ಎನ್ನುವಷ್ಟರಲ್ಲಿ ಈಕೆಯ ಜೀವನವೇ ಮುಗಿದು ಹೋಗಿದೆ.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕೊಡಚೆರವು ಗ್ರಾಮದ ಚೈತ್ರಾ ರಾಮಪ್ಪನವರ ಮಗಳು. ಎಂಎಸ್ಸಿ ಬಯೋ ಕೆಮಿಸ್ಟ್ರಿ ಮಾಡಿ ಕೈವಾರದ ಬಳಿ ಕಾಲೇಜುವೊಂದರಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಹೊಸಕೋಟೆ ಮೂಲದ ಯುವಕನೊಂದಿಗೆ ಇವರ ಮದುವೆ ನಿಶ್ಚಯವಾಗಿತ್ತು. ಫೆ.6ರಂದು ಇವರ ವಿವಾಹ ಆರತಕ್ಷತೆಯನ್ನು ಶ್ರೀನಿವಾಸಪುರ […]