ಮಗು ಎತ್ತಿಕೊಂಡು ಭಾಷಣ ಮಾಡಿದ ಜಿಲ್ಲಾಧಿಕಾರಿ ಬಗ್ಗೆ ಪರ-ವಿರೋಧ ಚರ್ಚೆ

ತಿರುವನಂತಪುರಂ,ನ.4-ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮದಲ್ಲಿ ತಮ್ಮ ಮುರೂವರೆ ವರ್ಷದ ಮಗುವನ್ನು ಎತ್ತಿಕೊಂಡು ಭಾಷಣ ಮಾಡಿರುವುದು ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಐಎಎಸ್ ಅಧಿಕಾರಿ ದಿವ್ಯಎಸ್. ಅಯ್ಯರ್ ಅವರು ಖಾಸಗಿ ಸಂಸ್ಥೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ತಮ್ಮ ಮಗನೊಂದಿಗೆ ಕಾಣಿಸಿಕೊಂಡಿದ್ದರು. ವೇದಿಕೆಯಲ್ಲಿ ಮಗುವನ್ನು ಎತ್ತಿಕೊಂಡು ಕುಳಿತುಕೊಂಡಿದ್ದ ದಿವ್ಯಾ ಅವರು ತಮ್ಮ ಸರದಿ ಬಂದಾಗ ಮಗುವನ್ನು ತೋಳಿನಲ್ಲಿ ಇಟ್ಟುಕೊಂಡೇ ಭಾಷಣ ಮಾಡಿದ್ದಾರೆ. ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ವಿಧಾನಸಭೆಯ ಉಪಾಧ್ಯಕ್ಷ ಚಿಟ್ಟಾಯಂ ಗೋಪಕ್‍ಕುಮಾರ್ ಅವರು ದಿವ್ಯ ಅವರ […]