ಮಗಳ ಅಶ್ಲೀಲ ವಿಡಿಯೋ ಮಾಡಿದ್ದನ್ನು ಪ್ರಶ್ನಿಸಿದ ಯೋಧನನ್ನು ಕೊಂದ ಕಿರಾತಕರು

ಅಹಮದಾಬಾದ್,ಡಿ.27-ಮಗಳ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನ್ನು ಪ್ರಶ್ನಿಸಲು ಹೋದ ಬಿಎಸ್‍ಎಫ್ ಯೋಧನನ್ನು ಆರೋಪಿ ಕುಟುಂಬ ವರ್ಗದವರು ಬಡಿಗೆಗಳಿಂದ ಬಡಿದು ಕೊಂದಿರುವ ಹೃದಯ ವಿದ್ರಾವಕ ಘಟನೆ ಗುಜರಾತ್‍ನಲ್ಲಿ ನಡೆದಿದೆ. ದುಷ್ಕರ್ಮಿಗಳಿಂದ ಹತ್ಯೆಯಾದ ಯೋಧನನ್ನು ಮೆಲ್ಜಿಭಾಯಿ ವಘೇಲಾ ಎಂದು ಗುರುತಿಸಲಾಗಿದೆ.ಯೋಧನನ್ನು ಹತ್ಯೆ ಮಾಡಿದ ಏಳು ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಪೊಲೀಸರು ಖಚಿತ ಪಡಿಸಿದ್ದಾರೆ. ವಘೇಲಾ ಅವರು ಪುತ್ರಿ ಸಹಪಾಠಿಯಾಗಿದ್ದ ಶೈಲೇಶ್ ಅಕಾ ಸುನಿಲ್ ಯಾದವ್ ಎಂಬಾತ ಆಕೆಯ ಬಾಯ್‍ಫ್ರೇಂಡ್ ಆಗಿದ್ದ. ಈತ ಆಕೆಯೊಂದಿಗೆ ಕಳೆದಿದ್ದ ಸಮಯದ […]