ಬಿಎಸ್‍ವೈ ನಿವೃತ್ತಿ ದಾಳ, ಹೈಕಮಾಂಡ್ ಗೊಂದಲ

ಬೆಂಗಳೂರು,ಜು.23- ಸದಾ ಒಂದಲ್ಲೊಂದು ಕಾರಣಕ್ಕಾಗಿ ರಾಜ್ಯ ರಾಜಕಾರಣದ ಕೇಂದ್ರಬಿಂದು ವಾಗುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹಠತ್ ನಿರ್ಧಾರ ಅಭಿಮಾನಿಗಳಿಗೆ ಮಾತ್ರವಲ್ಲದೆ ಸ್ವತಃ ಕೇಂದ್ರ ಬಿಜೆಪಿ ವರಿಷ್ಠರನ್ನು ಅಡಕತ್ತರಿಗೆ ಸಿಲುಕುವಂತೆ ಮಾಡಿದೆ. ಏಕೆಂದರೆ ಯಡಿಯೂರಪ್ಪ ಉರುಳಿಸಿರುವ ರಾಜಕೀಯ ದಾಳ ಕೇವಲ ಎದುರಾಳಿಗಳನ್ನು ಹುಬ್ಬುರೇವಂತೆ ಮಾಡಿರುವುದಲ್ಲದೆ ಪಕ್ಷದ ವರಿಷ್ಠರಿಗೂ ಕೂಡ ಕಗ್ಗಂಟಾಗಿ ಪರಿಣಮಿಸಿದೆ. ಈಗ ವರಿಷ್ಠರು ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬೇಕಾದರೆ ಸಾಕಷ್ಟು ಅಳೆದು ತೂಗಿ ಮುಂದಡಿ ಇಡಬೇಕಾಗುತ್ತದೆ. ಹೆಚ್ಚು ಕಮ್ಮಿಯಾದರೆ ಕರ್ನಾಟಕದಲ್ಲಿ ಬಿಜೆಪಿಗೆ 2018ರ ಫಲಿತಾಂಶ ಮರು ಕಳಿಸಲಿದೆ […]