ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಿರೀಕ್ಷೆಗೂ ಮೀರಿ ಹರಿದುಬಂತು ಆದಾಯ

ಬೆಂಗಳೂರು,ಡಿ.5- ಆದಾಯ ಸಂಗ್ರಹದಲ್ಲಿ ರಾಜ್ಯ ಉತ್ತಮ ಸಾಧನೆ ತೋರುತ್ತಿದೆ. ಕಳೆದ ಬಾರಿಗಿಂತ ಗಣನೀಯ ಏರಿಕೆ ಕಂಡಿದ್ದು, ಇದರಿಂದ 2022-23 ಬಜೆಟ್ ಅಂದಾಜು ಮೀರಿ ಆದಾಯ ಸಂಗ್ರಹದ ನಿರೀಕ್ಷೆ ಮೂಡಿದೆ.ಕಳೆದ ಮೂರು ವರ್ಷಗಳಿಂದ ಕೋವಿಡ್ ನಿರ್ಬಂಧಗಳಿಂದ ರಾಜ್ಯದ ಆದಾಯ ಸೊರಗಿ ಹೋಗಿದ್ದವು. ತೆರಿಗೆಮೂಲಗಳಿಂದ ನಿರೀಕ್ಷಿತ ಆದಾಯ ಸಂಗ್ರಹ ಸಾಧ್ಯವಾಗಿ ರಲಿಲ್ಲ. ಇದರಿಂದ ರಾಜ್ಯದ ಬೊಕ್ಕಸ ಆದಾಯ ಕೊರತೆ ಅನುಭವಿಸಿತ್ತು. ಆದರೆ ಇದೀಗ ಕೋವಿಡ್ ಆತಂಕ ಬಹುತೇಕ ದೂರವಾಗಿದ್ದು, ರಾಜ್ಯ ಸರ್ಕಾರದ ಆದಾಯ ಸಂಗ್ರಹ ಮತ್ತೆ ಸಂಪೂರ್ಣವಾಗಿ ಚೇತರಿಕೆ ಕಂಡಿದೆ. […]