ಕೇಂದ್ರ ಬಜೆಟ್ ಮೇಲೆ ಕರ್ನಾಟಕ ಭಾರೀ ನಿರೀಕ್ಷೆ

ಬೆಂಗಳೂರು,ಜ.31- ಕೇಂದ್ರ ಸರ್ಕಾರದ ಬಹುನಿರೀಕ್ಷಿತ 2022-23ನೇ ಸಾಲಿನ ಬಜೆಟ್ ನಾಳೆ ಸಂಸತ್‍ನಲ್ಲಿ ಮಂಡನೆಯಾಗುತ್ತಿದ್ದು, ಈ ಬಾರಿಯ ಆಯ-ವ್ಯಯದಲ್ಲಿ ರಾಜ್ಯಕ್ಕೆ ಬಂಪರ್ ಕೊಡುಗೆಗಳನ್ನು ನಿರೀಕ್ಷಿಸಲಾಗಿದೆ. ಚುನಾವಣಾ ವರ್ಷವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತಮ್ಮ ಬಜೆಟ್‍ನಲ್ಲಿ ಹೊಸ ಯೋಜನೆಗಳನ್ನು ಪ್ರಕಟಿಸಲಿದ್ದಾರೆ ಎಂಬ ಆಶಾಭಾವನೆ ಎಲ್ಲರಲ್ಲಿದೆ. ಈ ಹಿಂದಿನ ಬಜೆಟ್‍ನಲ್ಲಿ ರಾಜ್ಯಕ್ಕೆ ಬಹಳ ದೊಡ್ಡ ಮಟ್ಟದ ಕೊಡುಗೆಗಳೇನೂ ಕೇಂದ್ರ ಸರ್ಕಾರ ಘೋಷಣೆ ಮಾಡಿರಲಿಲ್ಲ. ಧಾರವಾಡದಲ್ಲಿ ಐಐಟಿ, ಬೆಂಗಳೂರಿನ ಮೆಟ್ರೋ ರೈಲು […]