ಯುವ ಸಮುದಾಯಕ್ಕೆ ಶಕ್ತಿತುಂಬಲು ಬಜೆಟ್‍ನಲ್ಲಿ ಹೆಚ್ಚಿನ ಆದ್ಯತೆ

ನವದೆಹಲಿ,ಫೆ.1-ಯುವಶಕ್ತಿಗೆ ಬಜೆಟ್‍ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಯುವ ಸಮುದಾಯದ ಕನಸುಗಳನ್ನು ಈಡೇರಿಸಲು ಅಮೃತ್ ಪೀಠಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಜೆಟ್ ಮಂಡನೆ ಮಾಡಿದ ಅವರು, ದೇಶಾದ್ಯಂತ ಜಾರಿಗೆ ತರಲಾಗಿರುವ ನೂತನ ಶಿಕ್ಷಣ ನೀತಿ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿದೆ. ಆರ್ಥಿಕ ನೀತಿ ಮತ್ತು ಉದ್ಯೋಗ ಒಳಗೊಂಡ ಶಿಕ್ಷಣ ನೀತಿಯಿಂದ ಮಹತ್ವದ ಸುಧಾರಣೆ ಮಾಡಲಿದೆ. ಉಚಿತ ಪಡಿತರ ಯೋಜನೆ ಇನ್ನೂ 1 ವರ್ಷ ವಿಸ್ತರಣೆ ಏಕೀಕೃತ ಭಾರತ ಕೌಶಲ್ಯ ಡಿಜಿಟಲ್ […]

ಬಜೆಟ್ ಹೈಲೈಟ್ಸ್ : ಇ-ಕೋರ್ಟ್‍ಗೆ 7 ಸಾವಿರ ಕೋಟಿ

ನವದೆಹಲಿ,ಫೆ.1- ನ್ಯಾಯದ ಸಮರ್ಥ ಆಡಳಿತಕ್ಕಾಗಿ, ಸುಮಾರು 7 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೂರನೇ ಹಂತದ ಇ-ನ್ಯಾಯಾಲಯಗಳ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಬಜೆಟ್ ಮಂಡಿಸಿದ ಅವರು, ಕೋವಿಡ್ ಅವಯಲ್ಲಿ ಒಪ್ಪಂದಗಳನ್ನು ಕಾರ್ಯಗತಗೊಳಿಸಲು ವಿಫಲವಾದ ಎಂಎಸ್‍ಎಂಇಗಳಿಗೆ ನೆರವು ನೀಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರ ಮತ್ತು ಅರೆ ಸರ್ಕಾರಿ ವಲಯದಲ್ಲಿನ ಶೇ.95ರಷ್ಟು ಸಂಸ್ಥೆಗಳಿಂದ ಮುಟ್ಟುಗೋಲು ಹಾಕಿಕೊಳ್ಳಲಾದ ಬಿಡ್ ಅಥವಾ ಕಾರ್ಯಕ್ಷಮತೆಯ ಭದ್ರತಾ ಠೇವಣಿಯನ್ನು ವಾಪಾಸ್ ಮಾಡಲಾಗುತ್ತದೆ. ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಬಹಳ […]

‘ಸಪ್ತ ಋಷಿ ಮಂತ್ರ’ ಪಠಿಸಿದ ನಿರ್ಮಲಾ ಸೀತರಾಮನ್

ನವದೆಹಲಿ,ಫೆ.1- ಈ ಬಾರಿಯ ಬಜೆಟ್‍ನಲ್ಲಿ ಸಪ್ತ ಋಷಿ ಮಂತ್ರ ಪಠಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪ್ರಮುಖವಾಗಿ ಏಳು ವಲಯಗಳಿಗೆ ಆದ್ಯತೆ ನೀಡಿದ್ದಾರೆ. ಬಜೆಟ್ ಪ್ರಾರಂಭದಲ್ಲೇ ಸಪ್ತಋಷಿ ಮಂತ್ರ ಪಠಿಸಿದ ಅವರು, ತಮ್ಮ ಬಜೆಟ್‍ನಲ್ಲಿ ಅಂತರ್ಗತ ಅಭಿವೃದ್ಧಿ, ಕೊನೆಯ ಮೈಲಿಯವರೆಗೂ ಸಂಪರ್ಕ, ಮೂಲಸೌಕರ್ಯ ಮತ್ತು ಹೂಡಿಕೆ, ಸುಪ್ತ ಸಾಮಥ್ರ್ಯವನ್ನು ಹೊರಹಾಕುವುದು, ಹಸಿರು ಬೆಳವಣಿಗೆ, ಯುವಶಕ್ತಿ ಮತ್ತು ಹಣಕಾಸು ವಲಯವನ್ನು ಬಲಪಡಿಸುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು. ಭಾರತದ ಆರ್ಥಿಕತೆ ಸರಿಯಾದ ಹಾದಿಯಲ್ಲಿದ್ದು, ಉಜ್ವಲ ಭವಿಷ್ಯದತ್ತ ಸಾಗುತ್ತಿದೆ. […]

ಬಜೆಟ್‍ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು

ನವದೆಹಲಿ,ಫೆ.1- ಪ್ರಸಕ್ತ ಆರ್ಥಿಕ ವರ್ಷದಲ್ಲಿ 45 ಲಕ್ಷ ಕೋಟಿ ರೂಪಾಯಿ ವೆಚ್ಚದ 2023-24ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿಂದು ಮಂಡಿಸಿದರು. ಹಿಂದಿನ ವರ್ಷ 24.3 ಲಕ್ಷ ಕೋಟಿ ಒಟ್ಟು ಆದಾಯ ಮತ್ತು 20.9 ಲಕ್ಷ ಕೋಟಿ ನಿವ್ವಳ ತೆರಿಗೆ ಆದಾಯವನ್ನು ನಿರೀಕ್ಷಿಸಲಾಗಿತ್ತು. ಒಟ್ಟು ಬಜೆಟ್‍ನ ಗಾತ್ರ 41.9 ಲಕ್ಷ ಕೋಟಿ ರೂಪಾಯಿಗಳಿತ್ತು. ಅದರಲ್ಲಿ ಬಂಡವಾಳ ವೆಚ್ಚಗಳನ್ನು 7.3 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿತ್ತು. ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ವಿತ್ತಿಯ […]

ಬಜೆಟ್‍ನಲ್ಲಿ ಕರ್ನಾಟಕಕ್ಕೆ ಗುಡ್ ನ್ಯೂಸ್ : ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ

ನವದೆಹಲಿ,ಫೆ.1- ಮಧ್ಯಕರ್ನಾಟಕಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಮಾಡುವ ಭದ್ರ ಮೇಲ್ದಂಡೆ ಯೋಜನೆಗೆ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 5300 ಕೋಟಿ ಅನುದಾನ ನೀಡುವ ಮೂಲಕ ರಾಜ್ಯಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಕರ್ನಾಟಕದ ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮತ್ತಿತರ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗೆ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಅವರು 5300 ಕೋಟಿ ಅನುದಾನ ಹಾಗೂ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಭದ್ರ ಮೇಲ್ದಂಡೆ ಯೋಜನೆ […]

ಅಗತ್ಯ ವಸ್ತುಗಳ ಮೇಲೆ ಹೊಸ ತೆರಿಗೆ ವಿಧಿಸಿಲ್ಲ : ನಿರ್ಮಲಾ

ನವದೆಹಲಿ,ಜ.16- ನಾನು ಕೂಡ ಮಧ್ಯಮ ವರ್ಗದ ಕುಟುಂಬದಿಂದ ಬಂದಳು. ಹೀಗಾಗಿ ಕಷ್ಟ ,ಒತ್ತಡದ ಬಗ್ಗೆ ನನಗೂ ಅರ್ಥವಾಗುತ್ತದೆ ಪ್ರಸ್ತುತ ಸರ್ಕಾರವು ಅಗತ್ಯವಸ್ತುಗಳ ಮೇಲೆ ಯಾವುದೇ ಹೊಸ ತೆರಿಗೆಗಳನ್ನು ವಿಧಿಸಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ನಿರ್ಮಲ ಸೀತಾರಾಮನ್ ಅವರು ಫೆ.1 ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದು ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದ ತೆರಿಗೆದಾರರಿಗೆ ಉಡುಗೊರೆ ನೀಡುವ ನಿರೀಕ್ಷೆ ನಡುವೆ ಈ ಭರವಸೆ ಕುತೂಹಲ ಮೂಡಿಸಿದೆ. […]

ಬ್ರೇಕಿಂಗ್ : ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ ,ಜ.9- ಹಿರಿಯ ನಾಗರಿಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿರುವ ಕೇಂದ್ರ ಹಣಕಾಸು ಸಚಿವಾಲಯ 75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಆದಾಯ ತೆರಿಗೆ ಸಲ್ಲಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದೆ. 2023ರ ಬಜೆಟ್‍ಗೂ ಮುನ್ನ ಆದಾಯ ತೆರಿಗೆಯಲ್ಲಿನ ಪರಿಹಾರದ ಕುರಿತು ಚರ್ಚೆಗಳು ನಡೆಯುತ್ತಿದ್ದು ಈ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಿರಿಯ ನಾಗರೀಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಆದಾಯದ ಮೂಲವಾಗಿ ಪಿಂಚಣಿ ಮತ್ತು ಬ್ಯಾಂಕ್ ಬಡ್ಡಿಯನ್ನು ಮಾತ್ರ ಹೊಂದಿರುವವರು ಇದಕ್ಕೆ ಅರ್ಹರಾಗಿದ್ದಾರೆ ಇಂತಹವರು ಜೀವನ ನಿರ್ವಹಣೆಗೆ […]

ಬಜೆಟ್‍ ತಯಾರಿ ಆರಂಭಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು,ಜ.3- ಹಣಕಾಸು ಇಲಾಖೆಯನ್ನೂ ಹೊಂದಿರುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲು ಸಿದ್ದತೆ ನಡೆಸಿದ್ದಾರೆ. ಆದರೆ ಈ ಬಾರಿಯೂ ರಾಜ್ಯ ಸರ್ಕಾರ ಹಣಕಾಸು ನಿರ್ವಹಣೆಗೆ ಸಾಲವನ್ನೇ ನೆಚ್ಚಿಕೊಂಡಿದೆ. 2022-23 ಸಾಲಿನಲ್ಲಿ ರಾಜ್ಯ ಸರ್ಕಾರ ಅಂದಾಜು ಸುಮಾರು 72,000 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. ಈ ಬಾರಿ ಒಟ್ಟು 72,089 ಕೋಟಿ ಸಾಲ ಮಾಡಲು ಬೊಮ್ಮಾಯಿ ಸರ್ಕಾರ ಯೋಜಿಸಿದೆ. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ […]