ಆರ್ಥಿಕ ಹಿಂಜರಿತಕ್ಕೆ ಬೂಸ್ಟರ್ ನೀಡುವ ಆಯವ್ಯಯ ಮಂಡಿಸಲಾಗುವುದು : ಸಿಎಂ

ಬೆಂಗಳೂರು,ಫೆ.13- ಸಮಗ್ರ ಕರ್ನಾಟಕದ ಅಭಿವೃದ್ಧಿಯ ಚಿಂತನೆ ಹಾಗೂ ಆರ್ಥಿಕ ಹಿಂಜರಿತಕ್ಕೆ ಬೂಸ್ಟರ್ ನೀಡುವ ಆಯವ್ಯಯವನ್ನು ಮಂಡಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2022-23ನೇ ಸಾಲಿನ ಆಯವ್ಯಯದಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಹಾಗೆಯೇ ಕೋವಿಡ್‍ನಿಂದ ತತ್ತರಿಸಿರುವ ಆರ್ಥಿಕತೆಗೆ ಚೈತನ್ಯ ನೀಡಲು ಬೂಸ್ಟರ್ ನೀಡುವ ಉದ್ದೇಶವಿದೆ ಎಂದರು. ಒಟ್ಟಾರೆ ಬಜೆಟ್‍ನಲ್ಲಿ ಆರ್ಥಿಕಾಭಿವೃದ್ಧಿ, ಜನಕಲ್ಯಾಣ, ಆರ್ಥಿಕ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಸಿದ್ದತೆ ನಡೆಸಲಾಗುತ್ತಿದೆ. ದುಡಿಯುವ ವರ್ಗ ಹಾಗೂ ಬಡವರ ಕಲ್ಯಾಣಕ್ಕೂ ಹೆಚ್ಚು […]