ಜಪಾನ್ ವಿರುದ್ಧ ಉತ್ತರ ಕೊರಿಯಾ ಆಕ್ರೋಶ : ರಕ್ತ-ನಿರ್ಣಾಯಕ ಕ್ರಮದ ಎಚ್ಚರಿಕೆ

ಸಿಯೋಲ್,ಡಿ.20- ಜಪಾನ್ ತನ್ನ ಸೇನಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿರುವುದರ ವಿರುದ್ಧ ಕೆಂಡ ಕಾರಿರುವ ಉತ್ತರ ಕೊರಿಯಾ, ರಕ್ತ ಮತ್ತು ನಿರ್ಣಾಯಕ ಮಿಲಿಟರಿ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಚೀನಾ ಮತ್ತು ಉತ್ತರ ಕೊರಿಯಾದಿಂದ ಬೆದರಿಕೆ ಅನುಭವಿಸುತ್ತಿರುವ ಜಪಾನ್‍ನ ಸೋಮವಾರ ತನ್ನ ಭದ್ರತಾ ತಂತ್ರಗಾರಿಕೆಯನ್ನು ಪ್ರಕಟಿಸಿದೆ. ಪ್ರತಿದಾಳಿ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮಿಲಿಟರಿ ಶಕ್ತಿ ವೃದ್ಧಿಗೆ ದ್ವಿಗುಣ ಹೂಡಿಕೆ ಮತ್ತು ಅಪರಾಧಾತ್ಮಕ ಹೆಜ್ಜೆಗಳ ವಿರುದ್ಧ ಕಾರ್ಯಾಚರಣೆ ಸಾಮಾಥ್ಯವನ್ನು ಹೆಚ್ಚಿಸಿಕೊಳ್ಳುವುದಾಗಿ ತಿಳಿಸಿದೆ. ಇದರಿಂದ ರೊಚ್ಚಿಗೆದ್ದಿರುವ ಉತ್ತರ ಕೊರಿಯಾ ಸರ್ಕಾರಿ ಸ್ವಾಮ್ಯದ ಮಾಧ್ಯಮದಲ್ಲಿ […]