ದಕ್ಷಿಣ ಕಾಶ್ಮಿರದಲ್ಲಿ ಉಗ್ರರ ಅಡಗುತಾಣ ಪತ್ತೆ

ಶ್ರೀನಗರ,ಮಾ.12- ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಅಡಗುತಾಣವನ್ನು ಪತ್ತೆ ಮಾಡಲಾಗಿದ್ದು, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಬಿಜ್‍ಬೆಹರಾದಲ್ಲಿರುವ ರಾಖ್ ಮೊಮಿನ್ ದಂಗಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಖಚಿತ ಮಾಹಿತಿ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಅಡಗುತಾಣವನ್ನು ಪತ್ತೆಹಚ್ಚಲಾಯಿತು. ಜೊತೆಗೆ ಐದು ಐಇಡಿಗಳು, ಪ್ರೋಗ್ರಾಮ್ಡ್ ಟೈಮರ್ ಸಾಧನಗಳು (ಪಿಟಿಡಿಗಳು) ಮತ್ತು ರೇಡಿಯೊ ನಿಯಂತ್ರಿತ ಸುಧಾರಿತ ಸ್ಪೋಟಕ ಸಾಧನಗಳು, […]

ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ಸೆರೆ

ಮುಜಾಫರ್‍ನಗರ (ಯುಪಿ), ಜ. 9 – ಅಕ್ರಮವಾಗಿ ದೇಶ ನಿರ್ಮಿತ ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಪೂರೈಕೆಯಲ್ಲಿ ತೊಡಗಿದ್ದ ಕಳ್ಳ ಅಡ್ಡೆಯನ್ನು ಉತ್ತರ ಪ್ರದೇಶ ಪೊಲೀಸರು ಭೇಧಿಸಿದ್ದಾರೆ. ಮೂವರನ್ನು ಬಂಧಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಒ.ಪಿ ಸಿಂಗ್ ತಿಳಿಸಿದ್ದಾರೆ. ಇದೇ ಜಿಲ್ಲೆಯವರಾದ ಸೌಕಿನ್, ಫುರ್ಕನ್ ಮತ್ತು ಆರಿಫ್ ಅವರನ್ನು ಬಂಧಿಸಿದ್ದು , ಗ್ಯಾಂಗ್‍ನ ಮತ್ತೊಬ್ಬ ಸದಸ್ಯ ಜಸ್ಬೀರ್ ಪರಾರಿಯಾಗಿದ್ದು ಆತನ ಸೆರೆಹಿಡಿಯಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರುಮುಜಾಫರ್‍ನಗರ […]